ಮುಖಪುಟ /ಸುದ್ದಿ ಸಮಾಚಾರ 

 ಮಾಜಿ ಸಿ.ಎಂ. ಮಕ್ಕಳ ಜಯಭೇರಿ

ಸೋತವರು ಕೇವಲ ಇಬ್ಬರೇ

basavaraj bommaiಬೆಂಗಳೂರು, ಮೇ ೧೦:-  ಈ ಬಾರಿ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿಗಳ ೮ ಪುತ್ರರ ಪೈಕಿ ೬ಮಂದಿ ಜಯ ಸಾಧಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಪುತ್ರರಾದ ಎಚ್.ಡಿ. ರೇವಣ್ಣ -ಹೊಳೆ ನರಸೀಪುರದಿಂದ, ಮಾಜಿ ಮುಖ್ಯಮಂತ್ರಿ ಎಚ್.ಡಿ.  ಕುಮಾರಸ್ವಾಮಿ -ರಾಮನಗರ ಕ್ಷೇತ್ರದಿಂದ, ಎಸ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸೊರಬ ಕ್ಷೇತ್ರದಿಂದ, ಧರಂಸಿಂಗ್ ಅವರ ಪುತ್ರ ಡಾ. ಅಜಯ್‌ಸಿಂಗ್-ಜೇವರ್ಗಿಯಿಂದ, ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್-ಗಾಂಧಿನಗರ ಕ್ಷೇತ್ರದಿಂದ, ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದಿಂದ, ಜಯ ಸಾಧಿಸಿದ್ದಾರೆ.

ಸೋದರನ ವಿರುದ್ಧ ಕಣದಲ್ಲಿದ್ದ ಕುಮಾರ ಬಂಗಾರಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರ ಪುತ್ರ ಕೈಲಾಸನಾಥ ಪಾಟೀಲ್ ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. 

ಮುಖಪುಟ /ಸುದ್ದಿ ಸಮಾಚಾರ