ಮುಖಪುಟ /ಸುದ್ದಿ ಸಮಾಚಾರ 

ಮತ ಹಾಕಿದ ನವ ದಂಪತಿ

ಬೆಂಗಳೂರು, ಮೇ ೫: ಇಂದು ಹಸೆ ಮಣೆ ಏರಿದ  ನವಜೋಡಿ ಪೇಟ, ಬಾಸಿಂಗ, ಮಾಲೆ ಧರಿಸಿ, ಮದುವೆಯ ಉಡುಗೆಯಲ್ಲೇ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದ್ದು ವಿಶೇಷವಾಗಿತ್ತು.

ಬೆಂಗಳೂರು ಬಸವನಗುಡಿಯ ನಿವಾಸಿ  ಸಂತೋಷ್ ತಾಳಿ ಕಟ್ಟಿದ ಬಳಿಕ ಬಸವನಗುಡಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು, ನಂತರ ತಮ್ಮ ಪತ್ನಿ ಕಾತ್ಯಾಯಿನಿಯವರನ್ನು  ಕುಮಾರಸ್ವಾಮಿ ಮತಗಟ್ಟೆಗೆ ಕರೆದೊಯ್ದು ಅವರಿಗೂ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟರು.

ನಂತರ ಮಾತನಾಡಿದ ಸಂತೋಷ್ ತಾವು ಮಾಂಗಲ್ಯ ಧಾರಣೆ ಬಳಿಕ ಮನೆಯ ಹಿರಿಯರನ್ನು ಒಪ್ಪಿಸಿ ನಂತರ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾಗಿ ತಿಳಿಸಿದರು.

ಮುಖಪುಟ /ಸುದ್ದಿ ಸಮಾಚಾರ