ಮುಖಪುಟ /ಸುದ್ದಿ ಸಮಾಚಾರ   
 

ಪ್ರಮಾಣ ವಚನ ಸಮಾರಂಭದಲ್ಲಿ ನಗೆ ಬುಗ್ಗೆ...

ನವದೆಹಲಿ;ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಮಲನಾಥ್ ತಮ್ಮ ಅವಸರದ ನಡೆಯಿಂದ ಸಭೆಯಲ್ಲಿದ್ದವರೆಲ್ಲರ ಮುಖದಲ್ಲಿ ನಗೆಬುಗ್ಗೆ ಅರಳಿಸಿದರು.

ಪ್ರಮಾಣ ವಚನವಿದ್ದ ಪತ್ರ ಹಿಡಿದು ಬಂದ ಅವರು, ರಾಷ್ಟ್ರಪತಿಗಳು ಪ್ರಮಾಣ ವಚನ ಬೋಧಿಸುವವರೆಗೂ ಕಾಯದೆ ತಾವೇ ಮೇ.... ಕಮಲನಾಥ್ ಎಂದು ಆರಂಭಿಸಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ನಂತರ ತಮ್ಮ ತಪ್ಪು ತಿದ್ದಿಕೊಂಡ ಅವರು, ರಾಷ್ಟ್ರಪತಿಗಳು ಪ್ರಮಾಣ ವಚನ ಬೋಧಿಸಿದ ಬಳಿಕ ಮತ್ತೆ ಪ್ರಮಾಣ ವಚನ ಸ್ವೀಕರಿಸಿದರು.  ನಂತರ ಪ್ರಮಾಣವಚನದ ಬಳಿಕ ಪುಸ್ತಕದಲ್ಲಿ ಸಹಿ ಹಾಕುವ ವ್ಯವದಾನವೂ ಇಲ್ಲದೆ ತಮ್ಮ ಆಸನದತ್ತ ತೆರಳಿದಾಗ, ಅಧಿಕಾರಿಗಳು ಸಚಿವರನ್ನು ತಡೆದು ಸಹಿ ಮಾಡುವಂತೆ ಕರೆದರು. ಆಗಲೂ ಸಭೆಯಲ್ಲಿದ್ದ ಎಲ್ಲರೂ ನಗುವುದು ಅನಿವಾರ್ಯವಾಯಿತು. ಹಿಂದಿನ ಯು.ಪಿ.ಎ. ಸರ್ಕಾರದಲ್ಲಿ ವಾಣಿಜ್ಯ ಮಂತ್ರಿಯಾಗಿದ್ದ ಕಮಲನಾಥ್ ತಮ್ಮ ಆತುರದ ಸ್ವಭಾವದಿಂದ ಇಂದು ನಗೆಪಾಟಲಿಗೆ ಈಡಾಗಿದ್ದಂತೂ ಸತ್ಯ.

 

 ಮುಖಪುಟ /ಸುದ್ದಿ ಸಮಾಚಾರ