ಮುಖಪುಟ /ಸುದ್ದಿ ಸಮಾಚಾರ   
 

ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಕಾಂಗ್ರೆಸ್ ಮೈತ್ರಿಕೂಟ

ಸೋನಿಯಾಗಾಂಧೀ, ಡಾ. ಮನಮೋಹನಸಿಂಗ್, Dr. Manmohan singh, Soniya Gandhiಬೆಂಗಳೂರು :15ನೇ ಲೋಕಸಭೆಗೆ 5 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ದೇಶದ ಜನತೆ ಕಾಂಗ್ರೆಸ್ ಮೈತ್ರಿಕೂಟಕ್ಕೆ ಹೆಚ್ಚಿನ ಒಲವು ತೋರಿದ್ದಾರೆ. ಈ ಬಾರಿ ಅತಂತ್ರ ಲೋಕಸಭೆ ಖಚಿತ ಎಂಬ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಮೈತ್ರಿಕೂಟಕ್ಕೆ 262ಕ್ಕೂ ಹೆಚ್ಚು ಸ್ಥಾನ ನೀಡುವ ಮೂಲಕ ಸ್ಥಿರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ.

ಯು.ಪಿ.ಎ. ಸರ್ಕಾರ ಡಾ. ಮನಮೋಹನಸಿಂಗ್ ನೇತೃತ್ವದಲ್ಲಿ ಕೈಗೊಂಡ ಜನಪರ ಕಾರ್ಯಕ್ರಮಗಳೇ ಪಕ್ಷದ ಈ ಗೆಲುವಿಗೆ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ವೈಯಕ್ತಿಕವಾಗಿ 202 ಕ್ಷೇತ್ರಗಳಲ್ಲಿ ಮುನ್ನಡೆದಿದೆ.

ಪಕ್ಷಕ್ಕೆ ಆಶೀರ್ವದಿಸಿರುವ ಮತದಾರರನ್ನು ಪ್ರಧಾನಿ ಡಾ. ಮನಮೋಹನಸಿಂಗ್ ಅಭಿನಂದಿಸಿದ್ದಾರೆ. 

 ಮುಖಪುಟ /ಸುದ್ದಿ ಸಮಾಚಾರ