ಮುಖಪುಟ /ಸುದ್ದಿ ಸಮಾಚಾರ 

ಮೇಲುಕೋಟೆಯ ಚೆಲುವನಾರಾಯಣನಿಗಿಂದು ವೈರಮುಡಿ

ಭಾನುವಾರ ನಡೆಯಲಿದೆ ರಾಜಮುಡಿ

ಮೇಲುಕೋಟೆ ಚೆಲುವ ನಾರಾಯಣಬೆಂಗಳೂರು,ಮಾ.19: ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ಪಾದಸ್ಪರ್ಶದಿಂದ ಪಾವನವಾದ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇವರಿಗೆ ಇಂದು ರಾತ್ರಿ ವೈರಮುಡಿ ಉತ್ಸವ ನಡೆಯಲಿದೆ.
ರಾತ್ರಿಯಿಂದ ಬೆಳಗಿನ ಝಾವದವರೆಗೂ ನಡೆಯುವ ಈ ವಿಶ್ವವಿಖ್ಯಾತ ಉತ್ಸವ ವೀಕ್ಷಿಸಲು ರಾಜ್ಯದ ನಾನಾಭಾಗಗಳಿಂದ ಅಷ್ಟೇ ಅಲ್ಲ, ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದಾರೆ.


ಮೈಸೂರು ಅರಸರು ದೇವರಿಗೆ ನೀಡಿರುವ ರಾಜಮುಡಿ, ವೈರಮುಡಿ (ಕಿರೀಟ)ಗಳನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿಟ್ಟಿದ್ದು, ಇಂದು ಶಾಸ್ತ್ರೋಕ್ತವಾಗಿ ಈ ಆಭರಣಗಳನ್ನು ಮೇಲುಕೋಟೆಗೆ ತರಲಾಗುತ್ತದೆ. ಮೊದಲಿಗೆ ಊರಮುಂದಿನ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ವೈರಮುಡಿ, ರಾಜಮುಡಿಗಳ ಪೆಟ್ಟಿಗೆ ಇಟ್ಟು, ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿಯ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಈ ಆಭರಣ ಪೆಟ್ಟಿಗೆಯನ್ನು ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. 


ಇಂದು ವೈರಮುಡಿ ಹಾಗೂ ಭಾನುವಾರ ವಜ್ರಖಚಿತ ರಾಜಮುಡಿ ಉತ್ಸವ ಜರುಗಲಿದೆ. ದೇವರಿಗೆ ಬೆಲೆ ಬಾಳುವ ವಜ್ರಖಚಿತ ಆಭರಣ ತೊಡಿಸುವ ಕಾರಣ ಭಕ್ತರು ದೇವರ ಮೇಲೆ ನಾಣ್ಯ ಎಸೆದು ದೇವರ ಮೂರ್ತಿಗಳಿಗೆಆಭರಣಗಳಿಗೆ ಹಾನಿ ಮಾಡದಂತೆ ಜಿಲ್ಲಾಡಳಿತ ಮತ್ತು ದೇವಾಲಯ ಮಂಡಳಿ ಮನವಿ ಮಾಡಿದೆ.

 ಮುಖಪುಟ /ಸುದ್ದಿ ಸಮಾಚಾರ