ಮುಖಪುಟ /ಸುದ್ದಿ ಸಮಾಚಾರ 

ಉಡುಪಿ ಚಿಕ್ಕಮಗಳೂರಲ್ಲಿ ಅತಿ ಕಡಿಮೆ ಮತದಾರರು

CEO, Karnataka, Anilkumar Jhaಬೆಂಗಳೂರು ಮಾರ್ಚ್ 10: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅತಿ ಕಡಿಮೆ ಮತದಾರರಿರುವ ಕ್ಷೇತ್ರ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 13,51,245 ಮತದಾರರಿದ್ದಾರೆ.  ಅವರಲ್ಲಿ 661364 ಪುರುಷರು, 689832 ಮಹಿಳೆಯರು ಇದ್ದಾರೆ ಎಂದು ತಿಳಿಸಿದರು. 

ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು ಇಲ್ಲಿ 22,28,847 ಮತದಾರರಿದ್ದಾರೆ.  ಇವರಲ್ಲಿ 11,66,810 ಪುರುಷರು ಹಾಗೂ 10,61,746 ಮಹಿಳೆಯರು, 291 ಇತರರು ಇದ್ದಾರೆ ಎಂದು ಮಾಹಿತಿ ನೀಡಿದರು. 

ಚುನಾವಣಾಧಿಕಾರಿಗಳಿಗೆ ತರಬೇತಿ:            ನಾಳೆ  ಚುನಾವಣಾ ಪ್ರಕ್ರಿಯೆ ಬಗ್ಗೆ  ಚುನಾವಣಾಧಿಕಾರಿಗಳಿಗೆ ತರಬೇತಿ ಏರ್ಪಡಿಸಲಾಗಿದೆ ಎಂದು ಅವರು ನುಡಿದರು.

ಮತಯಂತ್ರಗಳ ಕೊರತೆ ಇಲ್ಲ :      ಮುಂಬರುವ ಲೋಕಸಭಾ ಚುನಾವಣೆಗೆ ಮತಯಂತ್ರಗಳ ಯಾವುದೇ ಕೊರತೆ ಇಲ್ಲ ಎಂದು ಸ್ವಷ್ಟಪಡಿಸಿದ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲೆಗಳಲ್ಲಿ ಮತ ಯಂತ್ರಗಳ ತಪಾಸಣಾ ಕಾರ್ಯವನ್ನು ತಂತ್ರಜ್ಞರು ನಡೆಸುತ್ತಿದ್ದು ಶೇ. ೫೦ ರಷ್ಟು ಪೂರ್ಣಗೊಂಡಿದೆ.  ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.  

ವಿಪತ್ತು ನಿರ್ವಹಣೆ ಕಾಮಗಾರಿ:       ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿರುವ ಬಗ್ಗೆ ಸರ್ಕಾರದಿಂದ ಮಾಹಿತಿ ಕೋರಲಾಗಿದ್ದು ವಿಪತ್ತು ನಿರ್ವಹಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.  ಈ ಕಾಮಗಾರಿಗಳನ್ನು ಚುನಾವಣಾ ಆಯೋಗದ ಅನುಮತಿಯೊಂದಿಗೆ ಕೈಗೆತ್ತಿಕೊಳ್ಳಬಹುದು ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

ಚುನಾವಣಾ ದಿನಾಂಕ:      ಚುನಾವಣಾ ದಿನಾಂಕ ಬದಲಾಯಿಸುವ ಬಗ್ಗೆ   ಆರ್ಚ್ ಬಿಷಪ್ ಹಾಗೂ ಬಿಜೆಪಿ ಯಿಂದ ಮನವಿ ಸ್ವೀಕರಿಸಲಾಗಿದ್ದು ಈ ಮನವಿಗಳನ್ನು  ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ