ಮುಖಪುಟ /ಸುದ್ದಿ ಸಮಾಚಾರ 

ಆನೆ, ಕುದುರೆ, ಒಂಟೆ ಮೇಲೆ- ಚುನಾವಣೆ ಕಸರತ್ತು...

Election on Elephantಆನೆ ಮೇಲೆ, ಕುದುರೆ ಮೇಲೆ,
ದೋಣಿ ಮೇಲೆ
, ಹೆಲಿಕಾಪ್ಟರ್ ಮೇಲೆ...
ಎತ್ತಿನ ಮೇಲೆ
, ಕಾಲ್ನಡಿಗೆಯಲ್ಲಿ ,
ದ್ವೀಪದ ಒಳಗೆ
, ಮಂಜಿನ ಮೇಲೆ,
ಸುಡುಬಿಸಿಲಿನಲ್ಲಿ
, ಸಮುದ್ರ ಮಧ್ಯದಲ್ಲಿ,
ಕಾಡಿನಲ್ಲಿ
, ಹಿಮಾಲಯದ ಬೆಟ್ಟದಲ್ಲಿ,
ಚುನಾವಣೆ ನಡೆಸುವುದೆಂದರೆ
.........

ವಿಶಾಲ ಭಾರತದಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ತನ್ನ ಆಳುವವರ ಆಯ್ಕೆಗಾಗಿ ನಡೆಸುವ ಮತದಾನದಲ್ಲಿ ಈ ಎಲ್ಲಾ ಸಾರಿಗೆ ಮೂಲಗಳನ್ನು ಬಳಸುತ್ತದೆ. ವೈವಿಧ್ಯಮಯ ಬೆಟ್ಟಗುಡ್ಡ ಕಣಿವೆ ದ್ವೀಪ ಎತ್ತರದ ಮಂಜುಮುಸುಕಿದ ಹಿಮಾಲಯದ ಬೆಟ್ಟಗುಡ್ಡಗಳಲ್ಲಿ ವಿವಿಧ ರಾಜ್ಯಗಳ ದಟ್ಟ ಅರಣ್ಯಗಳಲ್ಲಿ ಇರುವ ಮತದಾರ ಪ್ರಭುವಿನ ಬಳಿಗೆ ಹೋಗಿ ಆತನ ಮತ ಪಡೆಯುತ್ತದೆ. ಇದಕ್ಕಾಗಿ ಹರಸಾಹಸ ಮಾಡುತ್ತದೆ.

Election preparation with the help of hourse2009ರ ಲೋಕಸಭಾ ಚುನಾವಣೆ ಐದು ಹಂತಗಳಲ್ಲಿ ನಡೆಯಿತು. 71,377 ಕೋಟಿ ಮತದಾರರು 8,34,944 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಗುಜರಾತ್‌ನ ಗಿರ್ ಮಹಾರಣ್ಯದಲ್ಲಿ ಇದ್ದದ್ದು ಒಬ್ಬ ಮತದಾರ ಮಾತ್ರ. ಆತನೇ ಗುರು ಭರತ್ ದಾಸ್‌ಜೀ ಮಹಾರಾಜ್. ಆತನ ಮತವನ್ನು ಪಡೆಯಲು ಆಯೋಗ ಆತನಿಗೋಸ್ಕರವೆ ಒಂದು ಮತಗಟ್ಟೆಯನ್ನು ಸ್ಥಾಪಿಸಿತು. ಇದೇ ರೀತಿ ಹಿಮಾಚಲ ಪ್ರದೇಶದ ಅತಿ ಎತ್ತರದ ಮತಗಟ್ಟೆ ಇದ್ದದ್ದು ಲಾಹುಲ್ ಮತ್ತು ಸ್ಪಿತಿ ಎಂಬ ಗುಡ್ಡಗಾಡು ಜಿಲ್ಲೆಗಳಲ್ಲಿ .ಇದು ಸಮುದ್ರ ಮಟ್ಟಕ್ಕಿಂತ 15೦೦೦ ಅಡಿ ಮೇಲಿದೆ. ಇಲ್ಲಿ 321 ಜನ ಮತದಾರರಿದ್ದರು. ಈ ಬೆಟ್ಟವನ್ನು ಹತ್ತುವುದು ಅತಿ ಕಷ್ಟ. ಆದರೂ 13,೦೦೦ ಅಡಿ ಚಾರಣ ಮಾಡಿ 36 ಅತಿಸೂಕ್ಷ್ಮ ಮತ್ತು 23 ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಪಶ್ಚಿಮ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆಯ ಶ್ರೀಖೋಲಾ ಮತಗಟ್ಟೆಗೆ 12 ಕಿ.ಮಿ ಪರ್ವತಾರೋಹಣ ನಡೆಸಿ ಮತದಾನಕ್ಕೆ  ಅನುಕೂಲ ಮಾಡಲಾಯಿತು.

ಅಸ್ಸಾಂನ ಸೋಣಿಪುರ ಜಿಲ್ಲೆಯಲ್ಲಿ ರಸ್ತೆ ಸಾರಿಗೆ ಮೂಲಕ ಹೋಗಲಾಗಲೇ ಇಲ್ಲ. ರಾಜ್ಯದ ಹಲವು ಭಾಗಗಳು ಹೀಗೆ ಇದ್ದವು. ಚುನಾವಣಾ ಸಾiಗ್ರ್ರಿಗಳನ್ನು ಅಧಿಕಾರಿಗಳು ಆನೆಯ ಮೇಲೆ ಕುಳಿತು ಸಾಗಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಾಗೂ ಸುಂದರಬನ ಅರಣ್ಯ ಪ್ರದೇಶದಲ್ಲಿ ಮತ್ತು ಲಕ್ಷದ್ವೀಪದ 105 ಮತಗಟ್ಟೆಗಳಿಗೆ ದೋಣಿಯ ಮೂಲಕವೇ ಹೋಗಬೇಕಾಯಿತು. ಮಿನಿಕಾಯ್ ದ್ವೀಪಕ್ಕೆ ಮತಯಂತ್ರಗಳನ್ನು ಹೆಲಿಕಾಪ್ಟರ್ ಮೂಲಕವೇ ಸಾಗಿಸಬೇಕಾಯಿತು.

Electionರಾಜಸ್ಥಾನದ ಮರಳುಗಾಡು ಜಿಲ್ಲೆಗಳಾದ ಬಾರ್ಮೇರ್ ಮತ್ತು ಜೈಸಲ್ಮೇರ್‌ಗಳಲ್ಲಿ ಭಯಂಕರ ಬಿಸಿಲು. ಮತದಾರರ ಅನುಕೂಲಕ್ಕಾಗಿ ಆರು ಮೊಬೈಲ್ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು.

ಹೀಗೆ ಎಲ್ಲಾ ರೀತಿಯ ವಾತಾವರಣ, ಹವೆ, ಅರಣ್ಯ ಪ್ರದೇಶಗಳು, ಬೆಟ್ಟಗುಡ್ಡಗಳು, ದೂರದೂರದ ಸ್ಥಳಗಳು ಎಲ್ಲಾ ಕಡೆಯಿರುವ ಮತದಾರರನ್ನು ತಮ್ಮ ಹಕ್ಕು ಚಲಾಯಿಸುವಂತೆ ಮಾಡಲು ಚುನಾವಣಾ ಆಯೋಗ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಬಲಗೊಳಿಸಲು ಎಲ್ಲರಿಗೂ ಮತದಾನದ ಹಕ್ಕು ನೀಡುವ ದೃಷ್ಟಿಯಿಂದ ಈ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನೀವೂ ತಪ್ಪದೆ ಮತ ನೀಡಿ, ಅರ್ಹರನ್ನು ಸಂಸತ್ತಿಗೆ ಆಯ್ಕೆ ಮಾಡಿ.

(ಲೇಖನ- ಪಿ.ಐ.ಬಿ.)

ಮುಖಪುಟ /ಸುದ್ದಿ ಸಮಾಚಾರ