ಮುಖಪುಟ /ಸುದ್ದಿ ಸಮಾಚಾರ 

ರಾಜ್ಯದಲ್ಲಿ ಏಪ್ರಿಲ್ 17ರಂದು ಮತದಾನ

 

Karnataka Mapನವದೆಹಲಿ, ಮಾರ್ಚ್ 5: 16ನೇ ಲೋಕಸಭಾ ಚುನಾವಣೆ ದೇಶಾದ್ಯಂತ ಒಟ್ಟು 9 ಹಂತಗಳಲ್ಲಿ ನಡೆಯಲಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17ರಂದು ಒಂದೇ ಹಂತದಲ್ಲಿ ನಡೆಯಲಿದೆ.

 

ದೆಹಲಿಯಲ್ಲಿಂದು ಮುಖ್ಯ ಚುನಾವಣೆ ಆಯುಕ್ತ ಸಂಪತ್ ಅವರು ಬಿಡುಗಡೆ ಮಾಡಿದ ಚುನಾವಣಾ ವೇಳಾಪಟ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

 

ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಮಾರ್ಚ್‌ 19ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 26 ಕೊನೆಯ ದಿನವಾಗಿರುತ್ತದೆ. ಮಾರ್ಚ್ 27 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್‌ 29 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

 

ಏಪ್ರಿಲ್ 17ರಂದು ರಾಜ್ಯದಲ್ಲಿ ಒಂದೇ ದಿನ ಮತದಾನ ನಡೆಯಲಿದ್ದು, ಮೇ 16ರಂದು ಮತಎಣಿಕೆ ನಡೆಯಲಿದೆ. ಹೀಗಾಗಿ ರಾಜ್ಯದ ಮತದಾರರು ಹಾಗೂ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಸರಿಯಾಗಿ ಒಂದು ತಿಂಗಳು ಕಾಯಬೇಕಾಗಿದೆ.

ಮುಖಪುಟ /ಸುದ್ದಿ ಸಮಾಚಾರ