ಮುಖಪುಟ /ಸುದ್ದಿ ಸಮಾಚಾರ   
 

ಗರಿಗೆದರಿದ ಚಲನಚಿತ್ರ ಅಮೃತ ಮಹೋತ್ಸವ ಸಂಭ್ರಮ

ಕನ್ನಡ ಚಲನಚಿತ್ರ ಅಮೃತ ಮಹೋತ್ಸವದಲ್ಲಿ ಅಂಬರೀಶ್ ಮತ್ತು ಲಕ್ಷ್ಮೀಬೆಂಗಳೂರು, ಮಾ.1 : ಬೆಂಗಳೂರು ಅರಮನೆಯ ಮೈದಾನದಲ್ಲಿ ಹೊಸ ಲೋಕವೇ ಸೃಷ್ಟಿಯಾಗಿತ್ತು. ಕನ್ನಡ ವಾಕ್ ಚಿತ್ರಗಳ ಅಮೃತ ಮಹೋತ್ಸವಕ್ಕಾಗಿ ನಿರ್ಮಿಸಲಾಗಿದ್ದ ಶಾಂತಿ ಸಂದೇಶ ಸಾರುವ ಪಾರಿವಾಳ ಹಾರುವಂತೆ ನಿರ್ಮಿಸಲಾಗಿದ್ದ ಆಕರ್ಷಕ ವೇದಿಕೆ ನಯನ ಮನೋಹರವಾಗಿತ್ತು.

ತಿಳಿನೀಲಾಗಸದಲ್ಲಿ ಭಾನುವಾರ ಸಂಜೆ ತಾರೆಗಳು ಮಿನುಗುತ್ತಿದ್ದರೆ, ಈ ಆಕರ್ಷಕ  ವೇದಿಕೆಯಲ್ಲಿ ಕನ್ನಡಚಿತ್ರ ತಾರೆಯರು ರಾರಾಜಿಸುತ್ತಿದ್ದರು.

ಮೇರೆ ಮೀರಿದ ಅಭಿಮಾನಿಗಳ ಉತ್ಸಾಹದ ನಡುವೆ ಚಿತ್ರನಟ ನಟಿಯರು ಹಾಡಿ, ನರ್ತಿಸಿ ಅಭಿಮಾನಿಗಳ ಮನಗೆದ್ದರು. ಬಣ್ಣ ಬಣ್ಣದ ಲೇಸರ್ ಬೆಳಕಿನ ಚಿತ್ತಾರ, ಲಕ್ಷಾಂತರ ಮಂದಿಯ ಕಿವಿ ತಲುಪುವಂತೆ ಹಾಕಲಾಗಿದ್ದ ಧ್ವನಿತರಂಗ, ಧ್ವನಿಬೆಳಗಿನ ಆಯೋಜನೆ ಎಲ್ಲರ ಮನಸೆಳೆಯಿತು.

ಕನ್ನಡ ಚಲನಚಿತ್ರ ಅಮೃತ ಮಹೋತ್ಸವ ಸಮಾರಂಭದಲ್ಲಿ ಸಹ ಕಲಾವಿದರೊಂದಿಗೆ ನೃತ್ಯ ಮಾಡುತ್ತಿರುವ ಅಭಿನಯ ಶಾರದೆ ಜಯಂತಿನಾಯಕನಟರಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ವಿಜಯರಾಘವೇಂದ್ರ, ಮುರಳಿ ಮತ್ತು ನಾಯಕ ನಟಿಯರಾದ ಜಯಂತಿ, ಶ್ರುತಿ, ತಾರಾ, ಅನು ಪ್ರಭಾಕರ್ ಹಾಗೂ ರವಿಚಂದ್ರನ್ ನೇತೃತ್ವದಲ್ಲಿ ಹಿರಿ ಕಿರಿಯ ಚಿತ್ರನಟರು  ನಡೆಸಿಕೊಟ್ಟ ನೃತ್ಯ ರೂಪಕಗಳು ಮನಸೆಳೆದವು.

ಆದರೆ ಪೂರ್ಣಚಂದ್ರನಲ್ಲೂ ಕಪ್ಪು ಕಳಂಕವಿರುವಂತೆ ಈ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಅವ್ಯವಸ್ಥೆಯೇ ಹೈಲೈಟ್ ಆದದ್ದು ಮಾತ್ರ ದುರಂತ.

 ಮುಖಪುಟ /ಸುದ್ದಿ ಸಮಾಚಾರ