ಮುಖಪುಟ /ಸುದ್ದಿ ಸಮಾಚಾರ 

ಶ್ರೀಶೈಲದಲ್ಲಿ ಯುಗಾದಿ ಉತ್ಸವ

ಬೆಂಗಳೂರು, ಮಾರ್ಚ್ ೭:

ಆಂಧ್ರ ಪ್ರದೇಶ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ  ದೇವಾಲಯದಲ್ಲಿ ಮಾರ್ಚ್ ೧೮ ರಿಂದ ೨೨ ರವರೆಗೆ ಐದು ದಿನಗಳ ಕಾಲ ಯುಗಾದಿ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ಅಕ್ಕ ಮಹಾದೇವಿಯ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮೂಲ ಸೌಕರ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ