ಮುಖಪುಟ /ಸುದ್ದಿ ಸಮಾಚಾರ 

ಆಸ್ಟ್ರೇಲಿಯಾ ಭಾರತ ಪಂದ್ಯದಿಂದ ವಿದ್ಯುತ್ ಭಾರ...

ಬೆಂಗಳೂರು, ಮಾರ್ಚ್ 27:  ನಿನ್ನೆ ಸಿಡ್ನಿಯಲ್ಲಿ ನಡೆದ ಭಾರತ ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ಸ್ ಪಂದ್ಯದ ಬಿಸಿ ಕರ್ನಾಟಕಕ್ಕೂ ಭರ್ಜರಿಯಾಗೇ ತಟ್ಟಿದೆ. ಇದೇನಿದು ಎತ್ತಣ ಸಿಡ್ನಿ, ಎತ್ತಣ ಕರ್ನಾಟಕ ಎನ್ನುತ್ತೀರಾ. ಇಲ್ಲೇ ಇರುವುದು ಸ್ವಾರಸ್ಯ. ಈ ಬಿಸಿಯನ್ನು ಅನುಭವಿಸಿದ್ದು, ರಾಜ್ಯ ಇಂಧನ ಇಲಾಖೆ.

ನಿನ್ನೆ ನಡೆದ ಈ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು  ನಾಡಿನ ಜನರೆಲ್ಲಾ ಟಿ.ವಿ. ಮುಂದೆ ಕುಳಿತ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ವಿದ್ಯುತ್ ಬಳಕೆ ಆಗಿದೆ.  ಬೇಸಿಗೆಯ ಬೇಗೆಯಿಂದ ಸರಾಸರಿ ವಿದ್ಯುತ್ ಬಳಕೆಯ ಪ್ರಮಾಣ ಈಗಾಗಲೇ ಪ್ರತಿನಿತ್ಯ 205 ಮಿಲಿಯನ್ ತಲುಪಿದೆ. ಆದರೆ, ನಿನ್ನೆ ವಿದ್ಯುತ್ ಬಳಕೆಯ ಪ್ರಮಾಣ 212 ಮಿಲಿಯನ್ ಯುನಿಟ್ ದಾಟಿತ್ತು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ವಿದ್ಯುತ್ ಬಳಕೆ ಪ್ರಮಾಣ ತಾರಕಕ್ಕೆ ಏರಿತ್ತು. ಆಗ ಬಳಕೆಯಾದ ವಿದ್ಯುತ್ 9549 ಎಂ.ಡಬ್ಲ್ಯು ತಲುಪಿತ್ತು.

ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ತೊಡಕಾಗದಂತೆ, ಅವರಿಗೆ ನಿರಾಶೆ ಆಗದ ರೀತಿಯಲ್ಲಿ ಇಂಧನ ಇಲಾಖೆಯೇನೋ ವಿದ್ಯುತ್ ಪೂರೈಸಿತು. ಆದರೆ, ಭಾರತ ತಂಡದ ಆಟಗಾರರು ಮಾತ್ರ ನಿರಾಶೆ ಮೂಡಿಸಿದರು.

 

ಮುಖಪುಟ /ಸುದ್ದಿ ಸಮಾಚಾರ