ಮುಖಪುಟ /ಸುದ್ದಿ ಸಮಾಚಾರ  

ಹೃದಯದಲ್ಲಿ ಸದಾ ಕನ್ನಡಿಗ - ನಾರಾಯಣಮೂರ್ತಿ

infosys Narayanamurthy, Viswakannada Sammelana, ವಿಶ್ವಕನ್ನಡ ಸಮ್ಮೇಳನ, ಬೆಳಗಾವಿ.ಬೆಂಗಳೂರು, ಮಾ. ೧೧ : ಹುಟ್ಟಿದ್ದು ಶಿಡ್ಲಘಟ್ಟ. ಓದಿದ್ದು ಮೈಸೂರು, ಕಾನ್ಪುರ. ದುಡಿದಿದ್ದು ಅಹಮದಾಬಾದ್, ಮುಂಬೈ, ಪುಣೆ, ಪ್ಯಾರಿಸ್. ಹೀಗಾಗಿ ತಮಗೆ ಹಲವು ಭಾಷೆ ಬಂದರೂ, ಹೃದಯದಲ್ಲಿ ತಾವು ಸದಾ ಕನ್ನಡಿಗನೇ  ಎಂದು ಇನ್‌ಫೋಸಿಸ್ ನಾರಾಯಣ ಮೂರ್ತಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ೩ ದಿನಗಳ ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರುನಮ್ಮ ಮನೆಯ ಭಾಷೆ ಕನ್ನಡ, ವ್ಯವಹಾರಿಕ ಭಾಷೆ ಇಂಗ್ಲೀಷ್ ಆದರೂ ತಾವು  ನನ್ನ ಭಾವನೆಗಳನ್ನು ಇಂದಿಗೂ ಕನ್ನಡದಲ್ಲಿಯೇ ಹೇಳಬಯಸುತ್ತೇನೆ ಎಂದು ತಿಳಿಸಿದರು.

ತಾವು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಎಂತಹಾ ಸಿರಿವಂತರ ಅತಿಥಿ ಸತ್ಕಾರವಿರಲಿ ತಮಗೆ ನಮ್ಮ ಬೆಂಗಳೂರಿಗೆ ಬಂದು ಕಾಫಿ ಕುಡಿದರೇ ನೆಮ್ಮದಿ. ನೆಮ್ಮದಿಗೂ ವ್ಯವಹಾರಕ್ಕೂ ಅಂತರವಿದೆ ಎಂದು ಪ್ರತಿಪಾದಿಸಿದರು.

ಈ ಬೆಳಗಾವಿ ಗಂಡು ಮೆಟ್ಟಿನ ಪ್ರದೇಶ. ಇಲ್ಲಿ ವೀರರಾಣಿ ಚನ್ನಮ್ಮ, ಅವಳ ವಿಶ್ವಾಸದ ಭಂಟ ಸಂಗೊಳ್ಳಿ ರಾಯಣ್ಣ, ತಮ್ಮ ನೆತ್ತರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ನೀಡಿದ್ದಾರೆ. ಇಲ್ಲಿ ಪಕ್ಕದಲ್ಲಿರುವ ಹಲಸಿ ಒಂದು ಕಾಲಕ್ಕೆ ಕದಂಬರ ಕದಂಬರ ಉಪ ರಾಜಧಾನಿಯಾಗಿತ್ತು. ಹೀಗೆ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಉತ್ತರ ಕರ್ನಾಟಕ ನಮ್ಮ ಕನ್ನಡ ನಾಡಿನ ಹೃದಯವಾಗಿದೆ ಎಂದರು.

ಉತ್ತರ ಕರ್ನಾಟಕ ತಮಗೆ ಅಪರಿಚಿತ ಪ್ರದೇಶವಲ್ಲ. ಆದರೆ ತಾವು  ಉತ್ತರ ಕರ್ನಾಟಕದ ಅಳಿಯನಾಗಿದ್ದೇನೆ. ಜೀವನದ ಅನೇಕ ಸುಂದರ ಸುಮಧುರ ದಿನಗಳನ್ನು ಇಲ್ಲಿ ಕಳೆದಿದ್ದೇನೆ ಎಂದು ತಿಳಿಸಿದರು. 

ಮುಖಪುಟ /ಸುದ್ದಿ ಸಮಾಚಾರ