ಮುಖಪುಟ /ಸುದ್ದಿ ಸಮಾಚಾರ   
      

ಕನ್ನಡ ಪ್ರಥಮ ಭಾಷೆ ಮಾಡಿ - ಜೀವಿ

Prof. G.V. ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಜಿ. ವೆಂಕಟಸುಬ್ಬಯ್ಯ ಮಾತನಾಡಿ, ಯಾವುದೇ ಕನ್ನಡ ಸಭೆಯಲ್ಲಿ ಇಷ್ಟು ಜನ ಸೇರಿದ್ದನ್ನು ನಾನು ಜೀವನದಲ್ಲೇ ನೋಡಿರಲಿಲ್ಲ ಎಂದು ಅಮಿತಾನಂದ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದ ಎರಡನೇ ರಾಜಧಾನಿಯಾಗುತ್ತಿರುವ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿಗರು ಕಲೆತು ನಡೆಸುತ್ತಿರುವ ಈ ಸಮಾರಂಭ ಅವಿಸ್ಮರಣೀಯ ಎಂದರು.

ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇರುವ ಕಾಳಜಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಸಂಕಲ್ಪ ಶಕ್ತಿ ಇಲ್ಲದಿದ್ದರೆ ಇಷ್ಟೊಂದು ದೊಡ್ಡ ಸಮಾರಂಭ ನಡೆಯುತ್ತಿರಲಿಲ್ಲ ಎಂದು ಶ್ಲಾಘಿಸಿದರು.

ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿ, ಶಾಲೆಯಲ್ಲಿ ಕನ್ನಡ ಬಳಸಿ, ಬಳಸುವ, ಬರೆಯುವ ಕನ್ನಡವನ್ನು ಸರಿಯಾಗಿ ಬಳಸಿ ಆಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಹೇಳಿದರು. ೧ರಿಂದ ೧೦ನೇ ತರಗತಿವರೆಗೆ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಕಲಿಸಿ ಎಂದು ಸಲಹೆ ಮಾಡಿದರು.

ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಮಾತನಾಡಿ, ತಮ್ಮ ೬೦ ವರ್ಷಗಳ ವೃತ್ತಿ ಜೀವನದಲ್ಲಿ ಇಂಥ ದೊಡ್ಡ ಸಮಾರಂಭ ಕಂಡಿರಲಿಲ್ಲ. ಈ ಸಮಾರಂಭ ಬೆಳಗಾವಿಯಲ್ಲಿ ಕನ್ನಡ ಬಿಟ್ಟು ಹೋಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿದೆ ಎಂದು ತಿಳಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಮಾಸ್ತಿ ವೆಂಕಟೇಶ ಐಯ್ಯಂಗಾರ್ ಹಾಗೂ ಡಿ.ವಿ.ಜಿ. ಅವರ ನಾಡಿನಿಂದ ಬಂದಿದ್ದೇನೆ. ಕನ್ನಡಕ್ಕೆ ದಾಸವರೇಣ್ಯರು, ವಚನಕಾರರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.

ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಇಂಥ ಒಂದು ಸುಂದರ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ದೇವೇಗೌಡರು, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಕಳೆದುಕೊಂಡರು ಎಂದು ವಿಷಾದಿಸಿದರು. ಬೆಳಗಾವ್ ಅನ್ನು ಬೆಳಗಾವಿ ಎಂದೇ ಹೆಸರಿಸುವಂತೆ ಆದೇಶ ಮಾಡಿ ಎಂದು ಮನವಿ ಮಾಡಿದರು.

ಸ್ವಾಗತ ಸಮಿತಿಯ ಪ್ರಭಾಕರ ಕೋರೆ, ಹಿರಿಯ ಜಾನಪದ ಕಲಾವಿದೆ ಸಕ್ರಿ ಬೊಮ್ಮನಗೌಡ, ಸಾಲುಮರದ ತಿಮ್ಮಕ್ಕ, ಹಿರಿಯ ಕಲಾವಿದ ಪುಟ್ಟಮಲ್ಲೇಗೌಡನಾಡೋಜ ದೇ.ಜವರೇಗೌಡ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. 

ಮುಖಪುಟ /ಸುದ್ದಿ ಸಮಾಚಾರ