ಮುಖಪುಟ /ಸುದ್ದಿ ಸಮಾಚಾರ  

ಐಶ್ವರ್ಯ ಕನ್ನಡ ಭಾಷಣ

ವಿಶ್ವಕನ್ನಡ ಸಮ್ಮೇಳನ, ಬೆಳಗಾವಿ, ಐಶ್ವರ್ಯ ರೈಬೆಂಗಳೂರು, ಮಾ. ೧೧ : ಮಾನನೀಯ ಮುಖ್ಯಮಂತ್ರಿ ಯಡಿಯೂರಪ್ಪ ನವರೆ, ನೀವೆಲ್ಲರೂ ನನ್ನ ಮೇಲೆ ಅಭಿಮಾನ, ಪ್ರೀತಿ ತೋರಿ  ಇಷ್ಟು ಅಭಿಮಾನದಿಂದ ವಿಶ್ವಕನ್ನಡ ಸಮ್ಮೇಳನಕ್ಕೆ ಕರೆದಿದ್ದೀರಿ, ನಿಮ್ಮೆಲ್ಲರಿಗೂ ನಾನು ಆಭಾರಿ... ಇದು ಕರ್ನಾಟಕ ಮೂಲದ ಹೆಸರಾಂತ ಬಾಲಿವುಡ್ ನಟಿ, ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಆಡಿದ ನಲ್ಮೆಯ ನುಡಿಗಳು.

ವೇದಿಕೆಗೆ ಬಂದು ತಮ್ಮ ಕೈಚೀಲದಿಂದ ಸಿದ್ಧ ಭಾಷಣದ ಹಾಳೆ ತೆಗೆದು ಭಾಷಣಕ್ಕೆ ಐಶ್ವರ್ಯ ನಿಂತಾಗ ಎಲ್ಲರಲ್ಲೂ ಕಾತರ ಇತ್ತು. ನಮ್ಮ ಐಶ್ವರ್ಯ ಏನು ಹೇಳುತ್ತಾರೆಂದು ಕೇಳುವ ಕೌತುಕ. ಎಲ್ಲರ ನಿರೀಕ್ಷೆಯಂತೆ ಕನ್ನಡ ನಾಡಿನ ಮಗಳು ಐಶ್ವರ್ಯ ಕನ್ನಡದಲ್ಲೇ ಮಾತು ಆರಂಭಿಸಿದಾಗ ಕನ್ನಡಾಭಿಮಾನಿಗಳ ಅದರಲ್ಲೂ ಐಶ್ವರ್ಯ ಅಭಿಮಾನಿಗಳ ಕೇಕೆ ತಾರಕಕ್ಕೇರಿತ್ತು.

ಇನ್ನು ಏನೇನು ಮಾತನಾಡುತ್ತಾರೆ ಕೇಳೋಣ ಎಂದುಕೊಳ್ಳುತ್ತಿರುವಾಗಲೇ, ಇಲ್ಲಿಗೆ ನನ್ನ ಕರೆಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿ, ಮತ್ತೆ ೩ ಸಾಲು ಹಿಂದಿಯಲ್ಲಿ ಇದೇ ಮಾತುಗಳನ್ನಾಡಿದ ಐಶ್ವರ್ಯ ಕೈಬೀಸುತ್ತಾ ತಮ್ಮ ಸ್ವಸ್ಥಾನಕ್ಕೆ ತೆರಳಿದಾಗ ಅಭಿಮಾನಿಗಳಲ್ಲಿ ನಿರಾಶೆ ಮನೆ ಮಾಡಿತು.

ಮರಾಠಿಗರ ಸಹಕಾರಕ್ಕೆ ಮುಖ್ಯಮಂತ್ರಿ ಸಂತಸ

ಬೆಂಗಳೂರು, ಮಾ.೧೧: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಮರಾಠಿ ಭಾಷಿಕರು ಸಹಕಾರ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸಮ್ಮೇಳನ ಯಾವುದೇ ಅಡ್ಡಿ ಆತಂಕಗಳಲ್ಲಿದೆ ಯಶಸ್ವಿಯಾಗಿ ನಡೆಯಲಿದೆ. ಸಮ್ಮೇಳನದಲ್ಲಿ ಮರಾಠಿ ಭಾಷಿಕರು, ಮುಖಂಡರು ಸಹ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಮ್ಮೇಳನಕ್ಕೆ ಯಾವುದೇ ಭಾದಕ ಇರಲಾಗದು ಎಂದು ಅವರು ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ