ಮುಖಪುಟ /ಸುದ್ದಿ ಸಮಾಚಾರ   
      

ಶೀಘ್ರ ಇಂಗ್ಲಿಷ್ ನಿಘಂಟು ಸೇರಲಿದೆ ಬೆಂಗಳೂರ್ಡ್

ನಾರಾಯಣ ಮೂರ್ತಿ, ಇನ್ಫೋಸಿಸ್, Belagam Viswakannada Sammelana, ವಿಶ್ವ ಕನ್ನಡ ಸಮ್ಮೇಳನ 2011, ಬೆಳಗಾವಿ, ಬೆಳಗಾಂಬೆಂಗಳೂರು, ಮಾ. ೧೧ : ತಂತ್ರಾಂಶ ತಂತ್ರಜ್ಞಾನ ಕಂಪನಿಗಳ ತವರೂರಾಗಿರುವ ಬೆಂಗಳೂರು, ವಿಶ್ವದಾದ್ಯಂತ ಪ್ರಸಿದ್ಧವಾಗಿದ್ದುಸ್ವಲ್ಪ ಕಾಲದಲ್ಲಿ ಬೆಂಗಳೂರ್ಡ್ ಎನ್ನುವ ಪದ ಇಂಗ್ಲಿಷ್ ಪದ ಕೋಶದಲ್ಲಿ ಸೇರಿದರೂ ಆಶ್ಚರ್ಯವಿಲ್ಲ ಎಂದು ಇನ್‌ಫೋಸಿಸ್ ಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ೩ ದಿನಗಳ ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಬ್ರಾಂಡ್ ನೇಮದದ ಬರುತ್ತಿದೆ ಎಂದು ಸೂಚ್ಯವಾಗಿ ತಿಳಿಸಿದರು.

ಸುಮಾರು ನಲವತ್ತು ವರ್ಷದ ಹಿಂದೆ ತಾವು  ಪದವೀಧರನಾದಾಗ, ತಾವು ದೂರದ ಅಹಮದಾಬಾದ್, ಪುಣೆ, ಮುಂಬೈ, ಭೂಪಾಲ್, ದೆಹಲಿಯಲ್ಲಿ ಕೆಲಸ ಮಾಡುವಾಗ, ಅಲ್ಲಿನ ಅಪರಿಚಿತ ಭಾಷೆಗೆ, ಸಂಸ್ಕೃತಿಗೆ ನಾವು ಹೊಂದಿಕೊಂಡು ಹೋಗಬೇಕಿತ್ತು.

ಆಗ ಒಂದು ದಿನ ಬೇರೆ ಪ್ರದೇಶದವರು ಕನ್ನಡ ನಾಡಿಗೆ ವಲಸೆ ಬಂದರೆ ಎಷ್ಟು ಚಂದ ಎಂದು ಕನಸು ಕಾಣುತ್ತಿದ್ದೆ. ನಮ್ಮ ಇನ್‌ಪೋಸಿಸ್‌ನ ವಿಶಾಲವಾದ ಕ್ಯಾಂಪಸ್‌ನಲ್ಲಿ ಕುಳಿತಾಗ ವಿವಿಧ ಭಾಷೆಯನ್ನಾಡುವ ತರುಣ- ತರುಣಿಯರನ್ನು ನೋಡಿದಾಗ ನನ್ನ ಮನಸ್ಸು ನವಲತ್ತು ವರ್ಷಗಳ ಹಿಂದೆ ಹಾರಿ ಹೋಗುತ್ತದೆ ಎಂದರು.

 

ಮುಖಪುಟ /ಸುದ್ದಿ ಸಮಾಚಾರ