ಮುಖಪುಟ /ಸುದ್ದಿ ಸಮಾಚಾರ   
      

ಹಣದ ಹಿಂದೆ ಬೀಳಬೇಡಿ-ನಾರಾಯಣ ಮೂರ್ತಿ

Belagam Viswakannada Sammelana, ವಿಶ್ವ ಕನ್ನಡ ಸಮ್ಮೇಳನ 2011, ಬೆಳಗಾವಿ, ಉದ್ಘಾಟಕರಾದ ಇನ್ಫೋಸಿಸ್ ನಾರಾಯಣ ಮೂರ್ತಿ ಭಾಷಣಬೆಂಗಳೂರು, ಮಾ.೧೧: ಯುವಕರು ಹಣದ ಹಿಂದೆ ಬೀಳಬಾರದು, ಹಣ ನಿಮ್ಮ ಹಿಂದೆ ಬರಬೇಕು ಎಂದು ಇನ್‌ಫೋಸಿಸ್ ನಾರಾಯಣ ಮೂರ್ತಿ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿತಾವು  ಅಸ್ತಮಿಸುತ್ತಿರುವ ಸೂರ್ಯ ! ನೀವೇ ನಮ್ಮ ದೇಶದ ಸಂಪತ್ತು. ಭವಿಷ್ಯ ಹಾಗೂ ಉದಯಿಸುತ್ತಿರುವ ಸೂರ್ಯ !! ನೀವು ಮುಂದೆ ಬರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದರು.

ವಿವೇಚನೆಯಿಂದ ನಿಷ್ಠೆಯಿಂದ ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು. ನೀವು ಹಣದಿಂದ ಓಡಿದರೆ, ಹಣ ನಿಮ್ಮಿಂದ ಓಡಿ ಹೋಗುತ್ತದೆ. ಮೊದಲು ನೀವು ಕೆಲಸ ಕಲಿಯಬೇಕು. ನಮ್ಮ ಕೆಲಸವನ್ನು ಪ್ರೀತಿಸಬೇಕು. ಮುನ್ನುಗ್ಗಿ ಯಶಸ್ಸನ್ನು ಸಾಧಿಸಬೇಕು. ನೀವೇ ಸ್ವಂತ ಉದ್ದಿಮೆದಾರರಾದರೆ ಅನೇಕ ಹೊಸ ಕೆಲಸದ ಅವಕಾಶಗಳು ತಾನಾಗಿಯೇ ಬಾಯಿ ತೆರೆಯುತ್ತವೆ. ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಠಿಸುವುದರಿಂದ ನಾವು ಬಡತನವನ್ನು ಹೊಡೆದೋಡಿಸಬಹುದು. ಹೊಸ ಹೊಸ ಸವಾಲುಗಳಿಗೆ ಆಹ್ವಾನಗಳಿಗೆ ನೀಡಬೇಕು. ಮುಗ್ಗಟ್ಟುಗಳನ್ನು ಎದುರಿಸಿ ನಿಂತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಾಡಿನ ಅಭ್ಯುದಯವೆಂದರೆ ಕೇವಲ ದೊಡ್ಡ ದೊಡ್ಡ ಪಟ್ಟಣಗಳ ಅಭಿವೃದ್ಧಿ ಮಾತ್ರವಲ್ಲ, ಸಾಪ್ಟ್‌ವೇರ್ ಕಂಪನಿಗಳಷ್ಟೇ ಅಲ್ಲ, ದೂರದ ಗ್ರಾಮಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇರದ ಅಸಹಾಯಕ ಜನರ ಜೀವನಮಟ್ಟ ಎಂದು ಬದಲಾಗುವುದೋ ಅಂದೇ ನಮ್ಮ ನಾಡಿನ ಪ್ರಗತಿಯಾದ ಹಾಗೆ ಎಂದ ಅವರು,  ಈ ಬಡತನದ ರೇಖೆಯನ್ನು ಅಳಿಸಲು ಇಂದಿನ ಜನಾಂಗಕ್ಕೆ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ನಮ್ಮ ಅನೇಕ ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ. ಉತ್ತಮ ಶಿಕ್ಷಕರಿಲ್ಲ. ಸರಿಯಾದ ವಿದ್ಯುತ್ ಪೂರೈಕೆ ಇಲ್ಲ. ಕುಡಿಯುವ ನೀರಿಲ್ಲ. ಸಾಕಷ್ಟು ಉತ್ತಮ ಆರೋಗ್ಯ ಕೇಂದ್ರಗಳಿಲ್ಲ. ಭಾರತದ ಕನ್ನಡ ನಾವೆಲ್ಲರೂ ಈ ನಿಟ್ಟಿನಲ್ಲಿ ವಿಚಾರಮಾಡಬೇಕು ಎಂದರು.

ತಮ್ಮ ಕಂಪನಿಯ ಪ್ರತಿಷ್ಠಾನ ತನ್ನಿಂದ ಆದಷ್ಟೂ ಶಾಲೆಗೊಂದು ಗ್ರಂಥಾಲಯ ವೈದ್ಯಕೀಯ ನೆರವು, ಧರ್ಮಶಾಲೆಯ ಕಟ್ಟಡ, ನಶಿಸಿಹೋಗುತ್ತಿರುವ ಕಲೆಗೆ ಪುನರ್ಜೀವ ನೀಡುವ ಪ್ರಯತ್ನ ಮಾಡುತ್ತಿದೆ. ಹೀಗೆ ಹಲವು ವಿಧದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದರು.

ಕನ್ನಡಿಗರಾಗಿರಿ

ನೀವು ಕನ್ನಡಿಗರಾಗಿಯೇ ಇರಬೇಕು. ಉನ್ನತ ಧ್ಯೇಯೋದ್ದೇಶಗಳನ್ನು ಇರಿಸಿಕೊಂಡು ಉದಾರ ದೃಷ್ಠಿ ಉಳ್ಳವರಾಗಿ ನಿಸ್ವಾರ್ಥ ಮತ್ತು ತ್ಯಾಗ ಮನೋಭಾವದಿಂದ ನುಡಿದರೆ ಅಭಿವೃದ್ಧಿ ಖಂಡಿತ ಸಾಧ್ಯ. ಇದನ್ನು ನನ್ನ ಬಾಳಿನ ಅನುಭವದಲ್ಲಿ ಕಲಿತಿದ್ದೇನೆ. ಇಂತಹ ವಿಶೇಷ ಸಮ್ಮೇಳನದ ಸಂದರ್ಭದಲ್ಲಿ ನನಗೆ ಆದಿ ಕವಿ ಪಂಪ ನೆನಪಾಗುತ್ತಾರೆ. ನನಗೆ ಕಾಲವೇನಾದರೂ ಎದುರಿಗೆ ನಿಂತು ಮತ್ತೆ ಏನು ಬೇಕು ಅಂದರೆ ಮರಿ ದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಕರ್ನಾಟಕ ದೇಶದೋಳ್ ಎನ್ನುತ್ತೇನೆ ಎಂದರು.

ಭವ್ಯ ಇತಿಹಾಸದ ನಾಡು

ನಮ್ಮ ಕನ್ನಡ ತಾವು  ಸುಮಾರು ಎರಡು ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ. ಇಲ್ಲಿ ವಿಶ್ವಮಾನ್ಯ ರಾಜರು ಆಳಿ, ಕನ್ನಡ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಬನವಾಸಿಯ ಕದಂಬರಿರಲಿ, ಬಾದಾಮಿಯ ಹಾಗೂ ಕಲ್ಯಾಣದ ಚಾಲುಕ್ಯರಿರಲಿ,, ದೋರಸಮುದ್ರದ ಹೊಯ್ಸಳರಿರಲಿ, ವಿಜಯನಗರದ ರಾಯರಿರಲಿ, ಎಲ್ಲರೂ ಈ ನಾಡಿನ ಸಂಸ್ಕೃತಿಗಾಗಿ, ಸರ್ವ ಧರ್ಮ ಸಮನ್ವಯಕ್ಕಾಗಿ ಹೋರಾಡಿದ್ದಾರೆ. ನಮ್ಮ ನಾಡಿನಲ್ಲಿ ಅನೇಕ ಅನುಭಾವಿಗಳು ಜನ್ಮ ತೆಳೆದು ಈ ನಾಡನ್ನು ಪುನೀತ ಮಾಡಿದ್ದಾರೆ. ಬಸವಣ್ಣ, ಮಧ್ವಾಚಾರ್ಯರು, ಅಕ್ಕ ಮಹಾದೇವಿ ಅವರು ಈ ನೆಲದ ಮಣ್ಣಿನಿಂದಲೇ ಬಂದಿದ್ದಾರೆ. ಹೆಸರಾಂತ ದಾಸರು, ವಚನಕಾರರು, ವಿದ್ವಾಂಸರು, ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಸಂಪದ್ಭರಿತವಾಗಿ ಮಾಡಿದ್ದಾರೆ. ಪ್ಮರಂದರ ದಾಸರು, ಕನಕದಾಸರು, ಶಿಶುನಾಳ ಷರೀಫರು, ಅಲ್ಲಮ ಪ್ರಭು, ಬಸವಣ್ಣನಂತಹವರನ್ನು ನಾವು ಸ್ಮರಿಸಲೇಬೇಕು. ಆಧುನಿಕ ಕನ್ನಡ ನಾಡಿಗಾಗಿ, ಅದರ ಸಂಸ್ಕೃತಿಗಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟ ಅವರು ಪ್ರಾತಃ ಸ್ಮರಣೀಯರು. ಸನ್ಮಾನ್ಯರಾದ ಕುವೆಂಪು, ದ. ರಾ. ಬೇಂದ್ರೆ, ಶಿವರಾಮ ಕಾರಂತ, ಸರ್ ಎಂ ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅಂತಹವರನ್ನು ನಾವು ನೆನೆಯಲೇ ಬೇಕು ಎಂದರು.

ನಾವು ಕನ್ನಡಿಗರು. ಸ್ವಭಾವತಃ ಸೌಮ್ಯ ಸ್ವಭಾವದವರು. ಸುಶೀಲರು. ಜಗಳ ಗಂಟರಲ್ಲ. ಮೃದು ಭಾಷಿಗರು. ಆದ್ದರಿಂದಲೇ, ಉತ್ತರ ಭಾರತದಲ್ಲಿ ಇಂಜಿನಿಯರ್ಸ್ಸ್ ಅಂದರೆ ಮೈಸೂರು ಇಂಜಿನಿಯರ್ಸ್  ಎನ್ನುತ್ತಾರೆ ಇಂತಹ ಸೊಬಗಿನ ಕನ್ನಡ ನಾಡು ನಾಳೆಯತ್ತ ದಾಪುಗಾಲು ಹಾಕುತ್ತಿರುವಾಗ ನಾಡಿನ ಕಡು ಬಡವರೂ ನೆನಪಾಗುತ್ತಾರೆ ಎಂದರು.  

ಮುಖಪುಟ /ಸುದ್ದಿ ಸಮಾಚಾರ