ಮುಖಪುಟ /ಸುದ್ದಿ ಸಮಾಚಾರ   
      

 ವಿಧಾನಸಭೆ ವಿಸರ್ಜನೆಗೆ ಸ್ವಾಮೀಜಿ ಸಲಹೆ

Vidhanasoudhaಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರ ಖರೀದಿ ಸರಿಯಲ್ಲ. ಜನರಿಂದ ಆಯ್ಕೆಯಾದ ಮತ್ತೊಂದು ಪಕ್ಷದ ಶಾಸಕರನ್ನು ಆಮಿಷ ಒಡ್ಡಿ ಆಡಳಿತ ಪಕ್ಷಕ್ಕೆ ಸೆಳೆಯುತ್ತಿದ್ದರೆ ಅದಕ್ಕೆ ಕೊನೆಯೇ ಇಲ್ಲ. ಪ್ರಜಾಪ್ರಭುತ್ವದ ಬುನಾದಿಯೇ ಅಲುಗಾಡುತ್ತದೆ. ನಿಮಗೆ ಸಂಖ್ಯಾಬಲದ ಗೊಂದಲಗಳಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ತೆರಳಲಿ ಎಂದು ರಂಭಾಪುರಿ ಶ್ರೀಗಳು ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿ ಪ್ರತಿಷ್ಠೆ, ಸೇಡಿನ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ನಿಮ್ಮ ಮೇಲೆ ಅವರು, ಅವರ ಮೇಲೆ ನೀವು ನಿತ್ಯ ಆರೋಪ ಪ್ರತ್ಯಾರೋಪ ಮಾಡುತ್ತಿದ್ದೀರಿ. ಜನರಿಗೆ ಇದರಿಂದ ಅಸಹ್ಯ ಮೂಡಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ಕಚ್ಚಾಟ ನಡೆಸುವುದರ ಬದಲು ಅಭಿವೃದ್ಧಿ ಕಡೆ ಗಮನಹರಿಸುವುದು ಒಳಿತು ಎಂದು ಎಲ್ಲ ರಾಜಕಾರಣಿಗಳಿಗೆ ಸಲಹೆ ನೀಡಿದ್ದಾರೆ.

ಉಪಯುಕ್ತ ಹಾಗೂ ರಾಜ್ಯದ ಹಿತಕ್ಕಾಗಿ ಚರ್ಚೆ ನಡೆಯಬೇಕಾದ ವಿಧಾನಮಂಡಳ ಅಧಿವೇಶನಗಳು ಪ್ರತಿಭಟನೆ, ಗಲಾಟೆಯಲ್ಲಿಯೇ ಮುಗಿಯುತ್ತಿರುವುದು ದುರ್ದೈವ.  ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಕೂಲಂಕಷವಾಗಿ ಚರ್ಚಿಸಲಿ ಎಂದು ಅವರು ಹೇಳಿದರು.

.

ಮುಖಪುಟ /ಸುದ್ದಿ ಸಮಾಚಾರ