ಮುಖಪುಟ /ಸುದ್ದಿ ಸಮಾಚಾರ   
      

ಇನ್ಫೋಸಿಸ್ ನಾರಾಯಣ ಮೂರ್ತಿ ಅವರಿಂದ ಉದ್ಘಾಟನೆ

Narayanamurthyಬೆಳಗಾವಿ: ಇಪ್ಪತೈದು ವರ್ಷಗಳ ನಂತರ ವಿಶ್ವ ಕನ್ನಡ ಸಮ್ಮೇಳನ ನಾಳೆಯಿಂದ ಮೂರು ದಿನಗಳ ಕಾಲ ಇಲ್ಲಿ ನಡೆಯಲಿದ್ದು, ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ತಿಳಿಸಿದ್ದಾರೆ.

ಅತ್ಯಾಧುನಿಕ ಮಾಧ್ಯಮ ಕೇಂದ್ರ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣಮೂರ್ತಿ, ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ ಐಶ್ವರ್ಯ ರೈ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದು, ಮಹತ್ವದ ಸಾಧನೆ ಮೆರೆದಿರುವ ಈ ಇಬ್ಬರು ಕನ್ನಡಿಗರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಆರಂಭದ ದಿನವೇ ಸನ್ಮಾನಿಸಲಿದ್ದಾರೆ ಎಂದರು.

ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ಪುಸ್ತಕ ಪ್ರದರ್ಶನ ಮಳಿಗೆ ಹಾಗೂ ಪೊಲೀಸ್ ಬ್ಯಾಂಡ್, ಚಿತ್ರಕಲಾ ಪ್ರದರ್ಶನಗಳನ್ನು ನಿನ್ನೆ ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ ಎಂದ ಅವರು ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಒಂದು ಮನಸ್ಸು, ಕನ್ನಡಿಗರ ಬದುಕಿನ ಭಾಗ ಎಂದು ಬಣ್ಣಿಸಿದರು.

ಗಡಿ ಜಿಲ್ಲೆಯಲ್ಲಿ ಕನ್ನಡಿಗರು-ಮರಾಠಿಗರು ಸೌಹಾರ್ದತೆಯಿಂದ ಒಟ್ಟುಗೂಡಿ ಈ ಹಬ್ಬ ಆಚರಿಸಲಾಗುತ್ತಿದೆ. ನಾಡಹಬ್ಬಕ್ಕೆ ಬೆಳಗಾವಿಯ ಸಮಸ್ತ ಜನತೆ ಹೃತ್ಪೂರ್ವಕ ಸ್ವಾಗತ, ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಶ್ರೀ ಕೃಷ್ಣದೇವರಾಯ ಸೇರಿದಂತೆ ಕನ್ನಡ ನಾಡನ್ನು ಆಳಿದ ಗತಕಾಲದ ಅರಸರ ಕೊಡುಗೆ ನೆನಪಿಸುವ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಶಿಲ್ಪ ಕಲೆ, ದೇಗುಲ ಮತ್ತಿತರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುವಂತೆ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಲೇಸರ್ ಮುಖಾಂತರ ಕರ್ನಾಟಕ ಏಕೀಕರಣಕ್ಕೆ ದುಡಿದ ಧುರೀಣರ ಚಿತ್ರ ಹಾಗೂ ಮಾಹಿತಿಗಳನ್ನು ಪ್ರದರ್ಶಿಸಲಾಗುವುದು. ನಂತರ ರಾಜ್ಯದ ಇತಿಹಾಸ ಭಿತ್ತಿರಿಸುವ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

.

ಮುಖಪುಟ /ಸುದ್ದಿ ಸಮಾಚಾರ