ಮುಖಪುಟ /ಸುದ್ದಿ ಸಮಾಚಾರ   
      

ಹಗರಣ ಬಯಲಿಗೆಳೆಯುವುದೇ ಪ್ರತಿಪಕ್ಷದ ಕಾಯಕ - ಎಚ್ಡಿಕೆ

H.D. Kumaraswamyಬೆಂಗಳೂರು, ಮಾ.೧೦ - ಆಡಳಿತ ಪಕ್ಷದ ನ್ಯೂನತೆಗಳನ್ನು ಮತ್ತು ಹಗರಣಗಳನ್ನು ಬಯಲಿಗೆ ಎಳೆಯುವುದೇ ಪ್ರತಿಪಕ್ಷಗಳ ಕಾಯಕ. ನಾನು ಆ ಕೆಲಸ ಮಾಡುತ್ತಿದ್ದನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತಮ್ಮ ಮಕ್ಕಳು ತಪ್ಪೇ ಮಾಡಿಲ್ಲ, ತಾವು ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ದಾಖಲೆಗಳ ಸಹಿತ ಆರೋಪ ಮಾಡಿದ್ದು, ಈ ಕುರಿತು ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದರು.

ಈ ಕುರಿತು ಯಾವುದೇ ತನಿಖೆ ನಡೆಸಲಿ, ಇಲ್ಲ ಸಿಬಿಐಗೆ ಒಪ್ಪಿಸಲಿ ಎಂದು ಸವಾಲು ಹಾಕಿದ ಅವರು, ಹಗರಣಗಳಲ್ಲೇ ಮುಳುಗಿರುವ ಯಡಿಯೂರಪ್ಪ ಅವರ ಎಲ್ಲ ಅಕ್ರಮಗಳನ್ನು ಬಯಲಿಗೆ ಎಳೆಯುವುದೇ ತಮ್ಮ ಕೆಲಸ ಎಂದು ಹೇಳಿದರು.

 

ಮುಖಪುಟ /ಸುದ್ದಿ ಸಮಾಚಾರ