ಮುಖಪುಟ /ಸುದ್ದಿ ಸಮಾಚಾರ 

ರಾಜ್ಯಪಾಲರ ಭಾಷಣ ನೀರಸ - ನಾಣಯ್ಯ

M.C. Nanaiahಬೆಂಗಳೂರು, ಜೂ.೩: ರಾಜ್ಯಪಾಲರ ಭಾಷಣ ನೀರಸ ಎಂದು ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಭಾಷಣದಲ್ಲಿ ಪ್ರಸ್ತಾಪ ಇಲ್ಲ. ಮುಖ್ಯಮಂತ್ರಿ ಆಗುವ ಸಿದ್ದರಾಮಯ್ಯ ಅವರ ಬಹು ದಶಕಗಳ ಕನಸು ನನಸಾಗಿದೆ. ಆದರೆ, ಅವರು ಮಾಡಿರುವ ಘೋಷಣೆಗಳನ್ನೇ ರಾಜ್ಯಪಾಲರಿಂದ ಭಾಷಣ ಮಾಡಿಸ್ತಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಮುಂದಿನ ೫ ವರ್ಷ ತಾನು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬ ಕಲ್ಪನೆಯಲ್ಲೇ ರಾಜ್ಯಪಾಲರಿಂದ ಭಾಷಣ ಮಾಡಿಸಬೇಕು. ಇದು ಮುಂದಿನ ೫ ವರ್ಷದ ಅವಧಿಗೆ ಯೋಜನೆಗಳ ದಸ್ತಾವೇಜು ಆಗಬೇಕು. ಇದರಲ್ಲಿ ವ್ಯಕ್ತವಾಗುವ ಕಲ್ಪನೆ ಚಿಂತನೆ ಮುಂದಿನ ಐದು ವರ್ಷಗಳ ಆಡಳಿತಕ್ಕೆ ದಾರಿ ದೀಪ ಆಗಬೇಕು. ಆದರೆ ಅಂಥ ಯಾವುದೆ ಅಂಶ ಇದರಲ್ಲಿಲ್ಲ ಎಂದರು.

ಸಿದ್ದರಾಮಯ್ಯ ೭ ಮುಂಗಡ ಪತ್ರ ಮಂಡಿಸಿದ್ದಾರೆ. ೮ನೇ ಮುಂಗಡಪತ್ರ ಮಂಡಿಸಲು ಸಿದ್ಧರಾಗುತ್ತಿದ್ದಾರೆ. ಆದರೆ ಈ ಭಾಷಣದಲ್ಲಿ ನಿಖರ ಗುರಿ ಇಲ್ಲ ಎಂದು ಹೇಳಿದರು.

ಇಂದಿನ ಭಾಷಣ ರಾಜ್ಯಪಾಲರು ಅವರಾಗೇ ಮಾಡುರುವ ಭಾಷಣ ಅಲ್ಲ, ಸಂಪುಟದಲ್ಲಿ ನಿರ್ಧರಿಸಿ, ಸರ್ಕಾರ ಬರೆದುಕೊಟ್ಟ ಮಾಡಿಸಿದ ಭಾಷಣ. ಇದರಲ್ಲಿ ರಾಜ್ಯವನ್ನು ಭೀಕರವಾಗಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಏನು ಎಂಬುದನ್ನು  ತಿಳಿಸಬೇಕು. ಆದರೆ ರಾಜ್ಯಪಾಲರ  ಭಾಷಣದಲ್ಲಿ ಇಂಥ ಯಾವುದೆ ಪರಿಹಾರ ಕೊಟ್ಟಿಲ್ಲ ಎಂದರು.

 ಮುಖಪುಟ /ಸುದ್ದಿ ಸಮಾಚಾರ