ಮುಖಪುಟ /ಸುದ್ದಿ ಸಮಾಚಾರ 

ಕೆಪಿಎಸ್‌ಸಿ ೩೬೨  ಗೆಜೆಟೆಡ್ ಹುದ್ದೆಗಳ ಆಯ್ಕೆ:ತನಿಖೆ

ಬೆಂಗಳೂರುಜೂನ್ ೧೦:   ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಗ್ರೂಫ್ ಎ ಮತ್ತು ಗ್ರೂಫ್ ಬಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಭ್ರಷ್ಠಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುವುದೆಂದು  ಮುಖ್ಯಮಂತ್ರಿಗಳು ಇಂದು ಸದನದಲ್ಲಿ ತಿಳಿಸಿದರು.  ಜೊತೆಗೆ ಈ ಸಂವಿಧಾನಾತ್ಮಕ ಸಂಸ್ಥೆಯ ಘನತೆ ಹಾಳಾಗಬಾರದು.  ಸೂಕ್ತ ತನಿಖಾ ಸಂಸ್ಥೆಯ ವರದಿ ಪಡೆದು ಆನಂತರ ಅಗತ್ಯ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.  ಮುಂದಿನ ಒಂದು ವಾರದಲ್ಲಿ  ಸಮಿತಿಯನ್ನು ರಚಿಸಲಾಗುತ್ತದೆ.  ೨ ವಾರಗಳಲ್ಲಿ ಕೂಲಂಕುಷ ತನಿಖಾ ವರದಿ ಪಡೆಯಲಾಗುತ್ತದೆ.  ಆರೋಪ ಸಾಬೀತಾದರೆ ಸರ್ಕಾರ ಕಠಿಣ ಕ್ರಮ ಜರುಗಿಸಲಾಗುವುದೆಂದು  ಅವರು ತಿಳಿಸಿದರು.

ಕೇಂದ್ರ ಲೋಕಸೇವಾ ಆಯೋಗದಲ್ಲಿ ಬಳಕೆಯಲ್ಲಿರುವ ಆಯ್ಕೆ ಪದ್ದತಿ ಬಗ್ಗೆ ಮಾಹಿತಿ ಪಡೆದುಕೊಂಡು ಇಲ್ಲಿ ನಿಯಮಾವಳಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಪರಿಶೀಲಿಸಲಾಗುವುದೆಂದರು.   

 ಮುಖಪುಟ /ಸುದ್ದಿ ಸಮಾಚಾರ