ಮುಖಪುಟ /ಸುದ್ದಿ ಸಮಾಚಾರ 

ಹೊಸ ವಿಷಯಗಳಿಲ್ಲ- ಎಚ್ ಡಿ ಕೆ

H.D.Kumarswamyಬೆಂಗಳೂರು, ಜೂ.೩: ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಬಿಜೆಪಿ ಸರ್ಕಾರದಲ್ಲಿದ್ದ ಯೋಜನೆಗಳನ್ನೇ ತನ್ನದೆಂಬಂತೆ ಘೋಷಿಸಿದ್ದಾರೆ ಜೊತೆಗೆ ಮುಂದಿನ ಯೋಜನೆಗಳ ಬಗ್ಗೆ ಯಾವುದೇ  ಸ್ಪಷ್ಟತೆಯೂ ಇದರಲ್ಲಿಲ್ಲ ಎಂದು ಪ್ರತಿಪಕ್ಷದ ನಾಯಕ  ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯಪಾಲರ ಭಾಷಣದಲ್ಲಿ ಕೃಷಿಕರ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ.  ಅವತ್ತಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಪಾಲರ ಭಾಷಣಕ್ಕೂ, ರಾಜ್ಯ ಕಾಂಗ್ರೆಸ್ ಭಾಷಣಕ್ಕೂ ವ್ಯತ್ಯಾಸವೇ ಇಲ್ಲ. ಕೆಲವು ಪದ ಬಳಕೆ ವ್ಯತ್ಯಾಸವಾಗಿದೆ ಅಷ್ಟೇ ಎಂದು ಹೇಳಿದರು.

ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ಹಲವಾರು ವಿಷಯ ಪ್ರಸ್ತಾಪ ಮಾಡಿಸಿದೆ. ಆದರೆ ಇದರಲ್ಲಿ ನಿಖರ ಗುರಿ ಇಲ್ಲ. ಸ್ಪಷ್ಟತೆ ಇಲ್ಲ. ಒಟ್ಟಾರೆ ಇದು ನೀರಸ ಭಾಷಣ ಎಂದರು.

ರೈತರ ಬಗ್ಗೆ ಒಂದೆರೆಡು ಸಾಲು ಹೇಳಿದ್ದಾರೆ. ಆದರೆ ರೈತರ ಸಂಕಷ್ಟಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬ ಮಾತಿಲ್ಲ. ಇದರಲ್ಲಿ ಯಾವುದೇ ಗಮ್ಮತ್ತಿಲ್ಲ. ಇದೆಲ್ಲವನ್ನೂ ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.

 ಮುಖಪುಟ /ಸುದ್ದಿ ಸಮಾಚಾರ