ಮುಖಪುಟ /ಸುದ್ದಿ ಸಮಾಚಾರ 

ವಿಧಾನಪರಿಷತ್ ಅಧಿವೇಶನವೂ ಆರಂಭ

ಬೆಂಗಳೂರು,ಜೂ.೩:- ವಿಧಾನಪರಿಷತ್ತಿನ ಕಲಾಪ ಇಂದು ಆರಂಭವಾಯಿತು. ಸದನದಲ್ಲಿ ರಾಜ್ಯಪಾಲರ ಭಾಷಣವನ್ನು ಮಂಡಿಸಲಾಯಿತು.

ಇದೇ ಸಂದರ್ಭದಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮೇಲ್ಮನೆ ಸಭಾನಾಯಕರಾಗಿ ಎಸ್.ಆರ್.ಪಾಟೀಲ್ ಮತ್ತು ವಿರೋಧ ಪಕ್ಷದ ನಾಯಕರಾಗಿ ಡಿ.ವಿ.ಸದಾನಂದಗೌಡ ಅವರನ್ನು ವಿದ್ಯುಕ್ತವಾಗಿ ಘೋಷಿಸಿದರು.

ಅದೇರೀತಿ ವಿಪಕ್ಷದ ಮುಖ್ಯ ಸಚೇತಕರಾಗಿ ಶಿವಯೋಗಿ ಸ್ವಾಮಿ, ಉಪನಾಯಕರಾಗಿ ಶಾಣಪ್ಪ ಅವರ ಹೆಸರನ್ನೂ ಘೋಷಿಸಿದರು.

ಸಭಾಪತಿ-ಉಪಸಭಾಪತಿಗಳು ಸದನದಲ್ಲಿ ಇಲ್ಲದ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಶಾಣಪ್ಪ, ಪ್ರತಾಪ್ ಚಂದ್ರಶೆಟ್ಟಿ, ವೀರಯ್ಯ ಸಭಾಪತಿ ಸ್ಥಾನದಲ್ಲಿ ಕುಳಿತು ಕಾರ್ಯ ನಿರ್ವಹಿಸಲಿದ್ದಾರೆಂದು ಸಭಾಪತಿಗಳು ಪ್ರಕಟಿಸಿದರು.

 ಮುಖಪುಟ /ಸುದ್ದಿ ಸಮಾಚಾರ