ಮುಖಪುಟ /ಸುದ್ದಿ ಸಮಾಚಾರ 

ಅಡ್ವಾಣಿ ಮನವೊಲಿಸುವೆ-ಪೇಜಾವರಶ್ರೀ

Advaniಬೆಂಗಳೂರು, ಜೂ.೧೦: ನರೇಂದ್ರ ಮೋದಿ ಅವರನ್ನು ೨೦೧೪ರ ಲೋಕಸಭೆ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ಬೇಸರಗೊಂಡು ರಾಜೀನಾಮೆ ಕೊಟ್ಟಿರುವ ಎಲ್.ಕೆ. ಅಡ್ವಾಣಿ ಕ್ರಮಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೊಸಬರಿಗೆ ಅವಕಾಶ ನೀಡುವ ಇಂಥ ಸಂದರ್ಭದಲ್ಲಿ ಅಡ್ವಾಣಿ ಅವರು ಈ ರೀತಿ ಕಠಿಣ ನಿರ್ಧಾರ ಕೈಗೊಳ್ಳಬಾರದಾಗಿತ್ತು. ಇದರಿಂದ ಪಕ್ಷಕ್ಕೆ ದೊಡ್ಡ ಹಾನಿ ಆಗಲಿದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ತಾವು ಇದೇ ೧೯ರಂದು ದೆಹಲಿಗೆ ತೆರಳುತ್ತಿದ್ದು, ಅಡ್ವಾಣಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹಾಗೂ ಅವರ ಮನವೊಲಿಸುವುದಾಗಿ ತಿಳಿಸಿದ್ದಾರೆ.

 

 ಮುಖಪುಟ /ಸುದ್ದಿ ಸಮಾಚಾರ