ಮುಖಪುಟ /ಸುದ್ದಿ ಸಮಾಚಾರ 

  ವಿಧಾನಪರಿಷತ್ ಚುನಾವಣೆ 13 ಅಭ್ಯರ್ಥಿಗಳ ನಾಮಪತ್ರ

ಬೆಂಗಳೂರು, ಜೂ.೧: ಈ ತಿಂಗಳ ೧೧ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ ೧೧ ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿಯ ೬, ಕಾಂಗ್ರೆಸ್‌ನ ೪, ಜೆಡಿಎಸ್‌ನಿಂದ ಒಬ್ಬರು ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೧೩ ನಾಮಪತ್ರ ಇಂದು ಸಲ್ಲಿಕೆಯಾಗಿವೆ.

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದವರಲ್ಲಿ ಪರಿಷತ್‌ ನ ಉಪಸಭಾಪತಿ ವಿಮಲಾಗೌಡ, ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್. ವೀರಯ್ಯ, ಬಾನುಪ್ರಕಾಶ್, ರಘುನಾಥ್ ಮಲಕಾಪುರೆ ಮತ್ತು ಸೋಮಣ್ಣ ಬೇವಿನಮರದ್ ಸೇರಿದ್ದಾರೆ.

ಕಾಂಗ್ರೆಸ್‌ ನಿಂದ ವಿಧಾನ ಪರಿಷತ್‌ನಲ್ಲಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಇಕ್ಬಾಲ್ ಅಹಮದ್ ಸರಡಗಿ, ಗೋವಿಂದರಾಜು ಮತ್ತು ಎಂ.ಆರ್. ಸೀತಾರಾಮ್ ಸಲ್ಲಿಸಿದ್ದಾರೆ.

ಜೆಡಿಎಸ್‌ನಿಂದ ಎಸ್.ಎಂ. ಆಗಾ ನಾಮಪತ್ರ ಸಲ್ಲಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಬಿ. ಸುರೇಶ್ ಮತ್ತು ಡಿ.ಆರ್. ಹರಿಶ್ಚಂದ್ರ ನಾಮಪತ್ರ ಸಲ್ಲಿಕೆಯಾಗಿದೆ.

ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಈ ತಿಂಗಳ ೪ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನ, ಅಗತ್ಯ ಬಿದ್ದಲ್ಲಿ ಈ ತಿಂಗಳ ೧೧ರಂದು ಮತದಾನ ನಡೆಯಲಿದೆ.  

ಮುಖಪುಟ /ಸುದ್ದಿ ಸಮಾಚಾರ