ಮುಖಪುಟ /ಸುದ್ದಿ ಸಮಾಚಾರ 

ಬೆಂಗಳೂರಿನಲ್ಲಿ ಫೆ. 20ರಿಂದ ವೈಮಾನಿಕ ಪ್ರದರ್ಶನ
ಡ್ರೋನ್ ಒಲಿಂಪಿಕ್, ಸುನೀತಾ ವಿಲಿಯಮ್ಸ್ ಭಾಗಿ ಸಾಧ್ಯತೆ.

Ario India 2019ಬೆಂಗಳೂರು, ಜ.31(ಕನ್ನಡರತ್ನ ವರದಿ):  ಪ್ರತಿ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಇದೇ ತಿಂಗಳ 20ರಿಂದ 24ರವರೆಗೆ ಉಕ್ಕಿನ ಹಕ್ಕಿಗಳ ಕಲರವ ಮತ್ತೆ ರಾಜ್ಯದ ರಾಜಧಾನಿಯಲ್ಲಿ ಮೊಳಗಲಿದೆ.

22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವೈಮಾನಿಕ ಪ್ರದರ್ಶನದಲ್ಲಿಈ ಬಾರಿ ಡ್ರೋನ್ ಗಳು ಗಮನ ಸೆಳೆಯಲಿವೆ. ಜಕ್ಕೂರು ವಿಮಾನ ನಿಲ್ದಾಣದಲ್ಲಿ ಡ್ರೋನ್ ಒಲಿಂಪಿಕ್ಸ್ ಸಹ ಏರ್ಪಡಸಿಲಾಗಿದೆ. ವ್ಯೂಮಯಾನಿ ಸುನಿತಾ ವಿಲಿಯಂಸ್ ಈ ಬಾರಿಯ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಕ್ಷಣಾ ಮತ್ತು ವಾಯು ಯಾನ ಸಂಸ್ಥೆಗಳು ಈ ವೈಮಾನಿಕ ಪ್ರದರ್ಶನದ ಅಂಗವಾಗಿ ನಡೆಯಲಿರುವ ವಸ್ತುಪ್ರದರ್ಶನದಲ್ಲಿ ಭಾಗಿಯಾಗುತ್ತಿದ್ದು, ಕೋಟ್ಯಂತರ ರೂಪಾಯಿ ವಹಿವಾಟುಗಳಿಗೆ ಒಪ್ಪಂದಗಳು ಮತ್ತು ತಿಳಿವಳಿಕೆ ಒಪ್ಪಂದಗಳು ಏರ್ಪಡುವ ನಿರೀಕ್ಷೆಯೂ ಇದೆ.

ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪಾರ್ಕಿಂಗ್ ಸಮಸ್ಯೆ ಆಗದಂತೆ ಗಮನ ಹರಿಸಲಾಗಿದೆ ಎಂದು ಏರ್ ಕಮಾಂಡಿಂಗ್ ಅಧಿಕಾರಿ ರಾವುರಿ ಶೀತಲ್ ತಿಳಿಸಿದ್ದಾರೆ. ಪ್ರದರ್ಶನ ಸ್ಥಳದಲ್ಲಿ ಟಿಕೆಟ್ ಕೌಂಟರ್, ಪುಡ್ ಕೋರ್ಟ್ ಇತ್ಯಾದಿ ಸೌಲಭ್ಯದ ಜೊತೆಗೆ ಪಾರ್ಕಿಂಗ್ ಸ್ಥಳದಿಂದ ಪ್ರದರ್ಶನ ಸ್ಥಳಕ್ಕೆ ಬರಲು ವೀಕ್ಷಕರಿಗೆ ಬಸ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಐದು ದಿನಗಳ ಕಾಲ ನಡೆಯಲಿರುವ ಈ ಉಕ್ಕಿನ ಹಕ್ಕಿಗಳ ರೋಮಾಂಚಕ ಪ್ರದರ್ಶನದಲ್ಲಿ,  ಯುದ್ಧವಿಮಾನಗಳು ಮತ್ತು ನಾಗರಿಕ ವಿಮಾನಗಳ ಪ್ರದರ್ಶನ, ಹಾರಾಟ, ಕಸರತ್ತಿನ ಜೊತೆಗೆ ಮಹಿಳಾ ದಿನಾಚರಣೆಯನ್ನೂ ಆಯೋಜಿಸಿರುವುದು ವಿಶೇಷವಾಗಿದೆ.

ವಿದ್ಯಾರ್ಥಿಗಳಿಗೂ ಈ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಆದ್ಯತೆ ನೀಡಲಾಗಿದೆ. ನಿತ್ಯ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

 

 ಮುಖಪುಟ /ಸುದ್ದಿ ಸಮಾಚಾರ