ಮುಖಪುಟ /ಸುದ್ದಿ ಸಮಾಚಾರ   
      

ಗಿರೀಶ್ ಕಾಸರವಳ್ಳಿ, ಆರ್.ಕೆ. ಶ್ರೀಕಂಠನ್,
ಅಜೀಂ ಪ್ರೇಮ್‌ಜೀಗೆ ಪದ್ಮ ಪ್ರಶಸ್ತಿ

R.K.Srikantanಬೆಂಗಳೂರು, ಜ. ೨೫ - ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ಸಂಪ್ರದಾಯದಂತೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ೧೧ ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಪ್ರೋದ ಅಜೀಂ ಪ್ರೇಮ್‌ಜಿ, ಸಾಹಿತಿ ದೇವನೂರು ಮಹಾದೇವ, ಚಿತ್ರ ನಿರ್ದೆಶಕ ಗಿರೀಶ್ ಕಾಸರವಳ್ಳಿ, ಇನ್‌ಫೋಸಿಸ್ ಕಾರ‍್ಯನಿರ್ವಾಹಕ ಕ್ರಿಸ್ ಗೋಪಾಲಕೃಷ್ಣ, ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ಸಂಗೀತ ವಿದ್ವಾಂಸ ಆರ್.ಕೆ. ಶ್ರೀಕಂಠನ್ ಪದ್ಮ ಪ್ರಶಸ್ತಿ ಪಡೆದವರಲ್ಲಿ ಸೇರಿದ್ದಾರೆ.

ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಹೆಸರಾಂತ ಆರ್ಥಶಾಸ್ತ್ರಜ್ಞ ವಿಜಯಕ್ ಕೇಲ್ಕರ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ, ಹೆಸರಾಂತ ಲೇಖಕ ಡಾ. ಸಿತಾಕಾಂತ್ ಮಹಾಪಾತ್ರ ಮತ್ತು ಕಲಾ ತಜ್ಞ ಕಪಿಲಾ ವಾತ್ಸಾಯನ, ವಿಪ್ರೋದ ಅಜೀಂ ಪ್ರೇಮ್‌ಜಿ ಅವರು ಈ ಬಾರಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿರುವ ೧೩ ಜನರಲ್ಲಿ ಸೇರಿದ್ದಾರೆ.

ಸಂಗೀತ ನಿರ್ದೇಶಕ ಖಯಾಮ್, ಚಿತ್ರ ತಾರೆಯರಾದ ಶಶಿಕಪೂರ್, ವಹೀದಾ ರೆಹಮಾನ್ ಮತ್ತು ರಂಗ ನಿರ್ದೇಶಕ ಸತ್ಯದೇವ್ ದುಬೆ ಅವರಿಗೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಸ್ಯಾಮ್ ಸರಣ್, ಇನ್‌ಫೋಸಿಸ್ ಕಾರ‍್ಯನಿರ್ವಾಹಕ ಕ್ರಿಸ್ ಗೋಪಾಲಕೃಷ್ಣ, ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ಮತ್ತು ಸಮಾಜ ಸೇವಕ ಶೋಬನಾ ರನಾಡೆ ಅವರೊಂದಿಗೆ ಪದ್ಮ ಭೂಷಣ ನೀಡಲಾಗಿದೆ.

ಚಿತ್ರ ತಾರೆಯರಾದ ಟಬು, ಕಾಜೋಲ್, ಇರ್ಫಾನ್ ಖಾನ್, ಪಾಪ್ ಗಾಯಕಿ ಉಷಾ ಉತ್ತುಪ್, ಕರ್ನಾಟಕ ಸಂಗೀತಗಾರ ಜಾನಕಿರಾಮ್, ಆರ್.ಕೆ. ಶ್ರೀಕಂಠನ್, ಕ್ರಿಕೆಟ್ ತಾರೆ ವಿ.ವಿ.ಎಸ್. ಲಕ್ಷ್ಮಣ್, ವೈಟ್‌ಲಿಫ್ಟರ್ ಕುಂಜುರಾಣಿ ದೇವಿ, ಕುಸ್ತಿಪಟು ಸುಶೀಲ್ ಕುಮಾರ್, ಸಾಹಿತಿ ದೇವನೂರು ಮಹಾದೇವ, ಚಿತ್ರ ನಿರ್ದೆಶಕ ಗಿರೀಶ್ ಕಾಸರವಳ್ಳಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದ ೭೫ ಜನರಲ್ಲಿ ಸೇರಿದ್ದಾರೆ. ಒಟ್ಟು ೧೨೮ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದ್ದು, ಈ ಪೈಕಿ ೩೧ ಮಹಿಳೆಯರಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ