ಮುಖಪುಟ /ಸುದ್ದಿ ಸಮಾಚಾರ   
      

ಜ.6ರಿಂದ ಜಂಟಿ ಅಧಿವೇಶನ

Assemblyಬೆಂಗಳೂರು, ಜ. ೪ - ವಿಧಾನಮಂಡಳದ ಜಂಟಿ ಅಧಿವೇಶನ ಜನವರಿ 6ರಿಂದ ಆರಂಭವಾಗಲಿದ್ದು, 10 ದಿನಗಳ ಕಾಲ ಕಲಾಪ ನಡೆಯಲಿದೆ. ಜನವರಿ 6ರಂದು ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರಾದ ಹಂಸ ರಾಜ್ ಭಾರದ್ವಾಜ್ ಅವರು ಭಾಷಣ ಮಾಡಲಿದ್ದಾರೆ.

7ರಂದು ಕಳೆದ ಅಧಿವೇಶನದಿಂದ ಈ ಅಧಿವೇಶನದವರೆಗಿನ ಅವಧಿಯಲ್ಲಿ ನಿಧನಹೊಂದಿದ ದಿವಂಗತ ಶಾಸಕ ಕೃಷ್ಣಮೂರ್ತಿ ಸೇರಿದಂತೆ ವಿಧಾನಸಭೆಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

ಉಳಿದ ಕಲಾಪದಲ್ಲಿ ಸರ್ಕಾರಿ ಕಲಾಪ ಹಾಗೂ ಖಾಸಗಿ ಕಲಾಪ ನಡೆಯಲಿದ್ದು, 8 ವಿಧೇಯಕಗಳನ್ನು ಮಂಡಿಸಲಾಗುವುದು ಎಂದು ವಿಧಾನಸಭಾದ್ಯಕ್ಷ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಅಕ್ಟೋಬರ್ 11ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಮಂಡಿಸುವ ವೇಳೆ ಅನುಚಿತವಾಗಿ ವರ್ತಿಸಿ ಸದನದ ಗೌರವಕ್ಕೆ ಚ್ಯುತಿ ತಂದ ಪ್ರತಿಪಕ್ಷದ 15 ಶಾಸಕರ ವಿಚಾರಣೆ ನಡೆಸಿದ ಸದನ ಸಮಿತಿ ತನ್ನ ವರದಿ ಸಲ್ಲಿಸಿದ್ದು, ಅದನ್ನೂ ಸದನದಲ್ಲಿ ಮಂಡಿಸಲಾಗುವುದು. ಸದನವೇ ಅವರ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

 ಮುಖಪುಟ /ಸುದ್ದಿ ಸಮಾಚಾರ