ಮುಖಪುಟ /ಸುದ್ದಿ ಸಮಾಚಾರ   
 

ಖ್ಯಾತ ಹಾಸ್ಯನಟ ತಾಯ್ ನಾಗೇಶ್ ಇನ್ನಿಲ್ಲ

ಸಿನಿಮಾ ನಟ ತಾಯ್ ನಾಗೇಶ್ ಇನ್ನಿಲ್ಲ, Tai nagesh, tamil actor no moreಬೆಂಗಳೂರು, ಜ.31: ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ತಾಯ್ ನಾಗೇಶ್ ಹೃದಯಾಘಾತದಿಂದ ಚೆನ್ನೈನಲ್ಲಿಂದು ನಿಧನ ಹೊಂದಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೂಲತಃ ಕನ್ನಡಿಗರಾದ ತಾಯ್ ನಾಗೇಶ್ ಕನ್ನಡದ ಹಲವು ಕಪ್ಪು ಬಿಳುಪು ಚಿತ್ರಗಳಲ್ಲಿ ನಟಿಸಿದ್ದರು. ಆಗ ಎಲ್ಲ ಚಿತ್ರಗಳ ಚಿತ್ರೀಕರಣವೂ ಮದ್ರಾಸ್ ನಲ್ಲಿಯೇ ನಡೆಯುತ್ತಿದ್ದ ಕಾರಣ ಅಲ್ಲಿಯೇ ನೆಲೆಸಿದ ನಾಗೇಶ್ ತಮಿಳು ಚಿತ್ರರಂಗ ಪ್ರವೇಶಿಸಿದರು. ತಮಿಳಿನಲ್ಲಿ ಅವರು ನಾಯಕನಟರಾಗಿದ್ದ ಸರ್ವರ್ ಸುಂದರಂ ಅವರಿಗೆ ಖ್ಯಾತಿ ಕೀರ್ತಿ ತಂದುಕೊಟ್ಟಿತ್ತು.

ಕನ್ನಡದ ಪೆದ್ದಗೆದ್ದ, ಗಡಿಬಿಡಿ ಗಂಡ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿಯೂ ತಾಯ್ ನಾಗೇಶ್ ನಟಿಸಿದ್ದರು.

ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು.

 ಮುಖಪುಟ /ಸುದ್ದಿ ಸಮಾಚಾರ