ಮುಖಪುಟ /ಸುದ್ದಿ ಸಮಾಚಾರ   
 

ಅಮೃತ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು

          ಬೆಂಗಳೂರು ಜನವರಿ ೧೯ (ಕ.ವಾರ್ತೆ):ಈ ಎಲ್ಲಾ ಗೋಷ್ಠಿಗಳಲ್ಲದೆ ಪ್ರತಿದಿನ ಸಂಜೆ ಸ್ಥಳೀಯರಿಂದ ಮತ್ತು ಖ್ಯಾತ ಕಲಾವಿದರಿಂದ ನಾಟಕ, ನೃತ್ಯ, ನೃತ್ಯ ರೂಪಕ, ಗಮಕ ವಾಚನ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ವಚನ ಗಾಯನ, ಜಾನಪದ ಗಾಯನ - ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  ವಿಶೇಷವಾಗಿ ಚಿತ್ರದುರ್ಗದ ಇತಿಹಾಸ-ಸಂಸ್ಕೃತಿಯನ್ನು ಬಿಂಬಿಸುವ ನಾಟಕಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.  ಶ್ರೀ ಆರ್.ಎನ್.ಜಯಗೋಪಾಲ್ ಅವರ ಸವಿನೆನಪಿಗಾಗಿ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ, ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ಪ್ರವೀಣ್ ಗೋಡ್ಕಿಂಡಿ ಅವರಿಂದ ಕೃಷ್ಣ ಫ್ಯೂಜನ್, ಶ್ರೀಮತಿ ನಿರುಪಮಾ ರಾಜೇಂದ್ರ ಅವರ ನೃತ್ಯ ರೂಪಕ, ಶ್ರಿಮತಿ ಸುಭದ್ರಮ್ಮ ಮನ್ಸೂರ್, ಶ್ರೀಮತಿ ಸಂಗೀತಾ ಕಟ್ಟಿ, ಶ್ರೀ ಅಪ್ಪಗೆರೆ ತಿಮ್ಮರಾಜು, ಶ್ರೀ ಮುದ್ದುಮೋಹನ್, ಶ್ರೀಮತಿ ಸುಪರ್ಣ ಉದಯಶಂಕರ್ ಮೊದಲಾದವರಿಂದ ಸುಗಮ ಸಂಗೀತ ಹಾಗೂ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷ ಅಂಶಗಳು

* ೭೫ನೆಯ ಸಮ್ಮೇಳನವಾಗಿರುವುದರಿಂದ ಅಮೃತೋತ್ಸವ ಸಮ್ಮೇಳನ ಎಂದು ಕರೆಯಲಾಗಿದೆ.

* ಸಮ್ಮೇಳನದ ನೆನಪಿಗಾಗಿ ಪರಿಷತ್ತು ೭೫ ಪುಸ್ತಕಗಳನ್ನು ಹೊರತರಲಿದೆ. 

* ೭೫ ಮಂದಿ ಗಣ್ಯರನ್ನು ಸನ್ಮಾನಿಸಲಾಗುವುದು.

* ನಾಡಿನ ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗೆಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು.

* ಸಮ್ಮೇಳನದ ನೆನಪಿಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು.

* ಚಿತ್ರದುರ್ಗ ಜಿಲ್ಲೆಯ ಸಮಸ್ಯೆಸಾಹಿತ್ಯ-ಸಂಸ್ಕೃತಿ, ಮಹಿಳಾ ಸಂವೇದನೆ ಕುರಿತಂತೆ ಮೂರು ಪ್ರತ್ಯೇಕ ಗೋಷ್ಠಿಗಳಿವೆ.

* ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದ್ದು, ಪುಸ್ತಕ ಮಾರಾಟಗಾರರು ಈಗಾಗಲೇ ಸುಮಾರು    ೫೦೦ ಮಳಿಗೆಗಳನ್ನು ಕಾಯ್ದಿರಿಸಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ