ಮುಖಪುಟ /ಸುದ್ದಿ ಸಮಾಚಾರ   
 

ಚಿತ್ರದುರ್ಗದಲ್ಲಿ ಸಮಾನಾಂತರ ಗೋಷ್ಠಿಗಳು

          sahitya parishad logoಬೆಂಗಳೂರು ಜನವರಿ ೧೯ (ಕ.ವಾರ್ತೆ): ಸಮ್ಮೇಳನದ ಅಂಗವಾಗಿ ಚಿತ್ರದುರ್ಗದ ಜಿಲ್ಲಾ ರಂಗಮಂದಿರದಲ್ಲಿ ಸಮಾನಾಂತರ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.  ೩೦-೧-೨೦೦೯ ರಂದು ಬೆಳಗ್ಗೆ ೧೧ ಗಂಟೆಗೆ ಮೂಲ ವಿಜ್ಞಾನ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಎಚ್.ಆರ್. ರಾಮಕೃಷ್ಣರಾವ್ ಅವರು ವಹಿಸಲಿದ್ದು ಡಾ. ಎಚ್.ಎಸ್.ನಿರಂಜನಾರಾಧ್ಯ, ಶ್ರೀ ಜಯರಾಜ್, ಶ್ರೀ ವಿ.ಎನ್.ನಾಯಕ್ ಹಾಗೂ ಶ್ರೀಮತಿ ಎನ್.ಇಂದಿರಮ್ಮ ಅವರುಗಳು ಭಾಗವಹಿಸಲಿದ್ದಾರೆ.  ಶ್ರೀ ಎಸ್.ಮಲ್ಲಿಕಾರ್ಜುನಯ್ಯ ಅವರು ಆಶಯ ಭಾಷಣ ಮಾಡಲಿದ್ದಾರೆ.

          ದಿನಾಂಕ ೩೦-೧-೨೦೦೯ ರಂದು ಮಧ್ಯಾಹ್ನ ೧-೩೦ ಕ್ಕೆ ಪ್ರೊ. ಲಕ್ಷ್ಮಣ ತೆಲಗಾವಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚಿತ್ರದುರ್ಗ ಜಿಲ್ಲಾ ಸಾಹಿತ್ಯ-ಸಂಸ್ಕೃತಿ ಗೋಷ್ಠಿಯಲ್ಲಿ ಡಾ. ಬಿ.ರಾಜಶೇಖರಪ್ಪ, ಶ್ರೀಮತಿ ತಾರಿಣಿ ಶುಭದಾಯಿನಿ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಶ್ರೀ ವೈ.ಡಿ.ಬದಾಮಿ, ಡಾ. ಎಸ್.ಜಿ.ರಾಮದಾಸ ರೆಡ್ಡಿ ಅವರುಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದು, ಪ್ರೊ. ಎಚ್.ಶ್ರೀಶೈಲ ಆರಾಧ್ಯ ಅವರು ಆಶಯ ಭಾಷಣ ಮಾಡಲಿದ್ದಾರೆ.

          ಅದೇ ದಿನ ಸಂಜೆ ೪ ಗಂಟೆಗೆ ಪ್ರೊ. ರವಿವರ್ಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಯೋಜನೆಗಳು ಮತ್ತು ಅನುಷ್ಠಾನದ ಸ್ಥಿತಿಗತಿ ಕುರಿತು ಶ್ರೀ ಭಕ್ತ ರಾಮೇಗೌಡ, ಶ್ರೀ ಕೆ.ದೊರೈರಾಜು, ಶ್ರೀಮತಿಕೆ.ನೀಲಾ ಶ್ರೀ ವೀರಸಂಗಯ್ಯ, ಶ್ರೀ ಮುಜೀಬ್ ಹಾಗೂ ಡಾ. ಕರಿಯಪ್ಪ ಮಾಳಗಿ ಅವರುಗಳು ಮಾತನಾಡಲಿದ್ದಾರೆ.

          ಡಾ. ಬಿ.ಎ.ವಿವೇಕ ರೈ ಅವರ ಅಧ್ಯಕ್ಷತೆಯಲ್ಲಿ ದಿನಾಂಕ ೩೧-೧-೨೦೦೯ ರಂದು ನಡೆಯಲಿರುವ ನಮ್ಮ ಕಾಲದ ಕನ್ನಡ ಸಾಹಿತ್ಯ-ಬಹುರೂಪತೆಯ ವಿನ್ಯಾಸಗಳು ಕುರಿತ ಗೋಷ್ಠಿಯಲ್ಲಿ ಡಾ. ಬಸವರಾಕಲ್ಗುಡಿ, ಡಾ. ಜಿ.ಆರ್.ತಿಪ್ಪೇಸ್ವಾಮಿ, ಡಾ. ಎಂ.ಎಸ್.ಆಶಾದೇವಿ ಹಾಗೂ ಶ್ರೀ ಬಸವಲಿಂಗಯ್ಯ ಅವರುಗಳು ಪ್ರಬಂಧಗಳನ್ನು ಮಂಡಿಸಲಿದ್ದಾರೆ.  ಡಾ. ಕೆ.ಸಿ.ಶಿವಾರೆಡ್ಡಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ.

          ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತ ಗೋಷ್ಠಿಯು ದಿನಾಂಕ ೩೧-೧-೨೦೦೯ ರಂದು ನಡೆಯಲಿದ್ದು, ಶ್ರೀ ನೀಲಗಿರಿ ತಳವಾರ, ಪ್ರೊ, ಎಂಜಿ.ಚಂದ್ರಶೇಖರಯ್ಯ, ಡಾ. ಕೆ.ವೈ.ನಾರಾಯಣಸ್ವಾಮಿ ಹಾಗೂ ಡಾ. ಜಿ.ಕೆ.ವಿಶ್ವೇಶ್ವರಪ್ಪ ಅವರು ಭಾಗವಹಿಸಲಿದ್ದು, ಪ್ರೊ. ಕಿ.ರಂ.ನಾಗರಾಜ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

          ಶ್ರೀ ಶಿವಮೂರ್ತಿ ಮುರುಘಾ ಶರಣರು ಅವರ ಅಧ್ಯಕ್ಷತೆಯಲ್ಲಿ ವಚನ ಸಾಹಿತ್ಯ ಗೋಷ್ಠಿಯಯ ದಿನಾಂಕ ೩೧-೧-೨೦೦೯ ರಂದು ಮಧ್ಯಾಹ್ನ ೩ ಗಂಟೆಗೆ ನಡೆಯಲಿದ್ದು, ಡಾ. ಕಾಳೇಗೌಡ ನಾಗವಾರ ಅವರು ಆಶಯ ನುಡಿಗಳನ್ನಾಡಲಿದ್ದಾರೆ.  ಡಾ. ಬಸವರಾಜ ಸಾದರ, ಡಾ. ಉಷಾಕಿರಣ್, ಡಾ. ಲೋಕೇಶ ಅಗಸನಕಟ್ಟೆ ಅವರುಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.

          ಕೊನೆಯ ಗೋಷ್ಠಿ ಚಿತ್ರದುರ್ಗ ಜಿಲ್ಲೆಯ ಮಹಿಳಾ ಸಂವೇದನೆಗಳು ದಿನಾಂಕ ೧-೨-೨೦೦೯ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದ್ದು, ಶ್ರೀಮತಿ ನೇಮಿಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.  ಪ್ರೊ. ಟಿ.ನೀಲಾಂಬಿಕೆ ಅವರ ಆಶಯ ನುಡಿಗಳಿದ್ದು, ಪ್ರೊ. ಪಿ.ಯಶೋದಾ, ಶ್ರೀಮತಿ ಹರಿಯಬ್ಬೆ ಕೆಂಚಮ್ಮ, ಶ್ರೀಮತಿ ದಯಾ ಪುತ್ತೂರಕರ್ ಅವರುಗಳು ಮಾತನಾಡಲಿದ್ದಾರೆ.            

 ಮುಖಪುಟ /ಸುದ್ದಿ ಸಮಾಚಾರ