ಮುಖಪುಟ /ಸುದ್ದಿ ಸಮಾಚಾರ   
 

ಬಿ.ಎಸ್. ವೆಂಕಟರಾಮ್ ಮಾಧ್ಯಮ ವೇದಿಕೆ  ಸ್ನೇಹ ಸಂವಾದ

ಬೆಂಗಳೂರು, ಜ.18: ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜನ್ಮ ತಳೆದ ಬಿ.ಎಸ್. ವೆಂಕಟರಾಮ್ ಮಾಧ್ಯಮ ವೇದಿಕೆ ಜನವರಿ ೨೫ ರಂದು ಬೆಳಗ್ಗೆ ೧೦.೩೦ಕ್ಕೆ ಚಾಮರಾಜಪೇಟೆ, ೪ನೇ ಮುಖ್ಯರಸ್ತೆ, ನಂ. ೧೯೩ ರಲ್ಲಿರುವ ಬಿ.ಎಸ್. ವೆಂಕಟರಾಮ್ ಕಲಾ ಭವನದಲ್ಲಿ ಎರಡನೇ  ಸ್ನೇಹ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.

ಸ್ನೇಹ ಸಂವಾದ ದಲ್ಲಿ ಭಾಗವಹಿಸಿ ಜನತಾ ಮಾಧ್ಯಮದ ನಾನಾ ಅಂಗಗಳಾದ ಪತ್ರಿಕೆಗಳು, ರೇಡಿಯೋ, ಟಿವಿ, ಅಂತರ್‌ಜಾಲ, ಮೊಬೈಲ್ ಹಾಗೂ ಮಾಧ್ಯಮ ಚಿತ್ರ ಗ್ರಾಹಕೆ ಕುರಿತು ತಮ್ಮ ರಚನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಛಿಸುವ ಸಹೋದರ ಸಹೋದರಿಯರು ೨೬೬೦೧೪೯೭ ಅಥವಾ ೯೪೪೮೦೪೯೧೧೩ ದೂರವಾಣಿಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.

ಪ್ರತಿ ತಿಂಗಳ ಸಂವಾದದಲ್ಲಿ ೧೨ ಮಂದಿ ಭಾಗವಹಿಸಲು ಅವಕಾಶವಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾನಾ ಪ್ರಜಾಸತ್ತಾತ್ಮಕ ಯಂತ್ರಗಳ ಕಾರ್ಯ ನಿರ್ವಹಣೆಗೆ ನೆರವಾಗುವ ಜನತಾ ಮಾದ್ಯಮಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಬಿ.ಎಸ್. ವೆಂಕಟರಾಮ್ ಮಾಧ್ಯಮ ವೇದಿಕೆ  ಪಕ್ಷಾತೀತವಾದ ಪ್ರಜಾಸತ್ತಾತ್ಮಕ ವೇದಿಕೆಯಾಗಿದೆಯೆಂದು ವೇದಿಕೆಯ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ತಿಳಿಸಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ