ಮುಖಪುಟ /ಸುದ್ದಿ ಸಮಾಚಾರ   

ಬೆಂಗಳೂರು ಬನಶಂಕರಿ ಬ್ರಹ್ಮರಥೋತ್ಸವ

ಬೆಂಗಳೂರು, ಜ.11: ಬೆಂಗಳೂರು ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯದಲ್ಲಿ ಇಂದು ಬ್ರಹ್ಮರಥೋತ್ಸವ ಜರುಗಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ತಾಯಿಯ ರಥವೆಳೆದು ಧನ್ಯರಾದರು.

ಬ್ರಹ್ಮರಥೋತ್ಸವದ ಪ್ರಯುಕ್ತ ಸಿಂಹವಾಹಿನಿಯಾದ ಬನಶಂಕರಿ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ರಥೋತ್ಸವದ ಅಂಗವಾಗಿ ನಗೆಹಬ್ಬ ಸೇರಿದಂತೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.

ಮುಖಪುಟ /ಸುದ್ದಿ ಸಮಾಚಾರ