ಮುಖಪುಟ /ಸುದ್ದಿ ಸಮಾಚಾರ   

ವಿದ್ಯುತ್ ನೀರಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ; ಯಡಿಯೂರಪ್ಪ

Varahi Project ಉದ್ಘಾಟನೆ ಸಮಾರಂಭಉಡುಪಿ, ಜ.10: ನೀರು ಮತ್ತು ವಿದ್ಯುತ್ ಇಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ ಇದನ್ನು ಪರಿಸರವಾದಿಗಳು ಮನಗಾಣಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲೆ ಹೊಸಂಗಡಿ ಬಳಿಯ ಯೋಜನಾ ಪ್ರದೇಶದಲ್ಲಿಂದು 230 ಮೆ.ವಾ. ಸಾಮರ್ಥ್ಯದ ವಾರಾಹಿ ಜಲ ವಿದ್ಯುತ್ ಯೋಜನೆಯ 2 ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಯೋಜನೆಯಿಂದ ರಾಜ್ಯಕ್ಕೆ 230 ಮೆ.ವಾ. ಹೆಚ್ಚುವರಿ ವಿದ್ಯುತ್ ಲಭಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ 1.25 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಒಂದೇ ವರ್ಷದ ಅವಧಿಯಲ್ಲಿ ನಾವು ಯೋಜನೆಗೆ ಮಾಡಿರುವ ವೆಚ್ಚ ಸರಿದೂಗಿ ಲಾಭ ತರಲಿದೆ ಎಂದರು.

ವಾರಾಹಿ 2ನೇ ಹಂತದ ಯೋಜನೆ, Varahi projectಇಂಧನ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದ್ದು, ಈ ಯೋಜನೆ ರಾಜ್ಯದ ವಿದ್ಯುತ್ ಅಭಾವ ನೀಗಿಸಲಿದೆ. ಸರ್ಕಾರ ಪ್ರಸ್ತುತ ಸಕ್ಕರೆ ಕಾರ್ಖಾನೆಗಳಿಂದ ಹಾಗೂ ನೆರೆ ರಾಜ್ಯಗಳಿಂದ ಹೆಚ್ಚು ಹಣ ಕೊಟ್ಟು ವಿದ್ಯುತ್ ಖರೀದಿಸುತ್ತಿದೆ. ಈ ಯೋಜನೆಯಿಂದ ಸರ್ಕಾರದ  ಎಂದರು.

ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಮಾತನಾಡಿ, ಬೆಳಗಿನ ಮತ್ತು ಸಂಜೆಯ ವಿದ್ಯುತ್ ಒತ್ತಡದ ಸಮಯದ ಬೇಡಿಕೆ ಪೂರೈಸಲು ವಾರಾಹಿ 2ನೇ ಹಂತದ ಯೋಜನೆ ಸಹಕಾರಿ ಎಂದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸ್ಥಳೀಯ ಶಾಸಕರು, ಮುಖಂಡರು  ಪಾಲ್ಗೊಂಡಿದ್ದರು. 

ಮುಖಪುಟ /ಸುದ್ದಿ ಸಮಾಚಾರ