ಮುಖಪುಟ /ಸುದ್ದಿ ಸಮಾಚಾರ   

ನಂದಿ ಬೆಟ್ಟದ ಸೌಂದರ್ಯೀಕರಣಕ್ಕೆ 11 ಕೋಟಿ ರೂ.

Nandi Hillsಚಿಕ್ಕಬಳ್ಳಾಪುರ, ಜ.10 :  ಕೋಲಾರ ಜಿಲ್ಲೆಯ ಪ್ರಸಿದ್ಧ  ಗಿರಿಧಾಮ ನಂದಿಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

11 ಕೋಟಿ ರೂಪಾಯಿ ವೆಚ್ಚದಲ್ಲಿ ನಂದಿ ಬೆಟ್ಟವನ್ನು ಮತ್ತಷ್ಟು ಸುಂದರ ಗಿರಿಧಾಮವಾಗಿ ಪರಿವರ್ತಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನ್ವರ್ ಪಾಶಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಬೆಟ್ಟದಲ್ಲಿ ಅತ್ಯಾಕರ್ಷಕವಾದ ಕಾರಂಜಿಗಳನ್ನು ನಿರ್ಮಿಸಲಾಗುವುದು. ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು. ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಮಹತ್ವದ ತಾಣವಾದ ನಂದಿ ಬೆಟ್ಟ, ಪ್ರವಾಸಿಗರ ಸ್ವರ್ಗವೂ ಆಗಿದ್ದು, ಬಡಜನರ ಊಟಿ ಎಂದೇ ಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ನಂದಿ ಬೆಟ್ಟಕ್ಕೆ ಮತ್ತಷ್ಟು ಮೆರಗು ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಬಳಿಯ ಸುಂದರ ಗಿರಿಧಾಮ ನಂದಿಬೆಟ್ಟ 
 

ಮುಖಪುಟ /ಸುದ್ದಿ ಸಮಾಚಾರ