ಮುಖಪುಟ /ಸುದ್ದಿ ಸಮಾಚಾರ   

ವಿಶ್ವಕನ್ನಡ ಸಮ್ಮೇಳನ: ಸ್ವಾಗತ ಸಮಿತಿ ರಚನೆ

ಬೆಳಗಾವಿ, ಜ.7:ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನಕ್ಕಾಗಿ ರಾಜ್ಯ ಸರಕಾರವು ಸ್ವಾಗತ ಸಮಿತಿಯನ್ನು ರಚಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಸಮಿತಿಯ ಗೌರಾವಾಧ್ಯಕ್ಷರಾಗಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾಗಿದ್ದಾರೆ.

ಈ ಸಮಿತಿಗೆ ಸಹಕಾರ ಸಚಿವರಾದ ಲಕ್ಷ್ಮಣ ಸವದಿ, ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಬಾಲಚಂದ್ರ ಲಕ್ಷ್ಮಣವರಾವ ಜಾರಕಿಹೊಳಿ, ತೋಟಗಾರಿಕೆ ಹಾಗೂ ಬಂದಿಖಾನೆ ಖಾತೆ ಸಚಿವರಾದ ಉಮೇಶ ಕತ್ತಿ, ಲೋಕಸಭಾ ಸದಸ್ಯರಾದ ರಮೇಶ ಜಿಗಜಿಣಗಿ, ಸುರೇಶ ಅಂಗಡಿ, ಬೆಳಗಾವಿ ಗ್ರಾಮೀಣ ಶಾಸಕರಾದ ಸಂಜಯ ಪಾಟೀಲ, ಬಾಗಲಕೋಟ ವಿಧಾನ ಪರಿಷತ್ ಸದಸ್ಯರಾದ ಡಾ|| ಮಲ್ಲನಗೌಡ ನಾಡಗೌಡ, ನಿಪ್ಪಾಣಿ ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ|| ಹೆಚ್.ಪಿ. ಖಿಂಚಾ, ಬೆಳಗಾವಿ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಬೆಂಗಳೂರ ರಂಗಭೂಮಿ ಕಲಾವಿದರಾದ ಚಿಂದೋಡಿ ಲೀಲಾ, ಬೆಳಗಾವಿ ಸಾಹಿತಿಗಳಾದ ಚಂದ್ರಕಾಂತ ಕುಸನೂರ, ಪತ್ರಕರ್ತ ರಾಘವೇಂದ್ರ ಜೋಶಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಪತ್ರಕರ್ತ ಉಮಾದೇವಿ ಟೋಪಣ್ಣವರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡಾ ಪಾಟೀಲ, ಹಯವದನ ಜೋಶಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ. ಬಸವರಾಜ ಜಗಜಂಪಿ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಏಕರೂಪ ಕೌರ್ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಎಸ್.ಜಿ. ಪಾಟೀಲ , ಜಿಲ್ಲಾಧಿಕಾರಿ ಡಾ|| ಜೆ. ರವಿಶಂಕರ ಅವರನ್ನು ಈ ಸಮಿತಿಗೆ ಸದಸ್ಯರನ್ನು ನೇಮಿಸಲಾಗಿದೆ. 

ಈ ಸಮಿತಿಯು ವಿಶ್ವಕನ್ನಡ ಸಮ್ಮೇಳನ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಬೆಳಗಾವಿ ನಗರದಲ್ಲಿ ಆಗಬೇಕಾದ ಕಾರ್ಯಕ್ರಮಗಳು ಹಾಗೂ ಇತರ ಎಲ್ಲ ವ್ಯವಸ್ಥೆ ಮಾಡಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ಮುಖಪುಟ /ಸುದ್ದಿ ಸಮಾಚಾರ