ಮುಖಪುಟ /ಸುದ್ದಿ ಸಮಾಚಾರ   

ಭಾರತದಲ್ಲಿ ತಾಯಿ ಸ್ಥಾನ ಶ್ರೇಷ್ಠ

ಗುಲಬರ್ಗಾ, ಜ.7: ಭಾರತ ದೇಶದ ಪ್ರತಿ ಕುಟುಂಬ, ಸಮಾಜ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ತಾಯಿಯ ಸ್ಥಾನ ಶ್ರೇಷ್ಠವಾಗಿದ್ದು, ಸಮಾಜ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಮಾನವೀಯ ಮೌಲ್ಯಗಳ ವಿಶೇಷ ಸ್ಥಾನಮಾನ ಕಾಪಾಡಲು ಶ್ರಮಿಸಬೇಕೆಂದು ಭಾರತದ ಘನತೆವೆತ್ತ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಹೇಳಿದರು.

ಅವರು ಬುಧವಾರ ಗುಲಬರ್ಗಾದಲ್ಲಿ ಮಹಾರಾಣಾ ಪ್ರತಾಪಸಿಂಗ್ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿದ ನೂತನ ಶ್ರೀಮತಿ ಪದ್ಮಾವತಿ ನಾರಾಯಣಸಿಂಗ್ ಸಭಾಗೃಹವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು ತಮ್ಮ ತಾಯಿಯ ಹೆಸರಿನಲ್ಲಿ ಸಭಾಗೃಹ ನಿರ್ಮಿಸಿರುವುದನ್ನು ಪ್ರಶಂಸಿಸಿದರು ಎಂದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ದೇಶದ ೨ನೇ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ಅವರು ತಮ್ಮ ತಾಯಿಯವರ ಬಗ್ಗೆ ಅತ್ಯಂತ ಪ್ರೀತಿ, ಆದರ, ಅಭಿಮಾನಗಳನ್ನು ಹೊಂದಿದ್ದರು ಎಂದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ರಾಮೇಶ್ವರ ಠಾಕೂರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್. ಸವದಿ, ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ, ಡಾ|| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಪ್ರಭಾವತಿ ಧರ್ಮಸಿಂಗ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರು ಸ್ವಾಗತಿಸಿದರು.

ಮುಖಪುಟ /ಸುದ್ದಿ ಸಮಾಚಾರ