ಮುಖಪುಟ /ಸುದ್ದಿ ಸಮಾಚಾರ   

ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾ|| ಮಳಿಮಠ್

ಬೆಂಗಳೂರು, ಜ ೬. : ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶರಾದ ಬಿ.ಎಸ್. ಮಳೀಮಠ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಸುರೇಶಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ನಾನು ಮತ್ತು ಸಂಸದೀಯ ವ್ಯವಹಾರಗಳ  ಇಲಾಖೆಯಿಂದ ಹೊರತರಲಾಗಿರುವ  ನಗರಾಭಿವೃದ್ಧಿಯ ನವಪರ್ವ   ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ಕಿರುಹೊತ್ತಿಗೆಯನ್ನು ಬಿಡುಗಡೆಮಾಡಿ ಮಾತನಾಡಿದ ಸಚಿವರು ರಾಜ್ಯದಲ್ಲಿ ನೂತನವಾಗಿ ಪ್ರಾರಂಭಿಸಲಾಗುವ ಕಾನೂನು ವಿಶ್ವ ವಿದ್ಯಾಲಯದ ಉಪ ಕುಲಪತಿಗಳನ್ನಾಗಿ ಡಾ ಜಿ.ಎಸ್. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.  ಕಾನೂನು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾಗಿ ಈ ಮೊದಲು ಶ್ರೀ ಪಾಟೀಲ್ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂದು ಸುದ್ದಿಗಾರರನ್ನುದ್ದೇಶಿಸಿ ತಿಳಿಸಿದರು.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವಿಧೇಯಕ, ತೋಟಗಾರಿಕೆ, ವಿ.ವಿ. ವಿಧೇಯಕ, ಕಾನೂನು ವಿಶ್ವ ವಿದ್ಯಾಲಯ ವಿಧೇಯಕ, ನಗರಪಾಲಿಕೆ ವಿಧೇಯಕ, ಉದ್ಯಾನವನ ಸಂರಕ್ಷಣೆಗೆ ವಿಧೇಯಕ, ವೈದ್ಯಕೀಯ ಸೇವೆಗಳ ವಿಧೇಯಕ ಹಾಗೂ ಕಂದಾಯ ಭೂಮಿ ವಿಧೇಯಕ ಹಾಗೂ ಕಂದಾಯ ಭೂಮಿ ವಿಧೇಯಕಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದ ಸಚಿವರು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಅಧಿಕಾರಿಗಳನ್ನೊಳಗೊಂಡ ಜಾಗೃತ ದಳವನ್ನು ರಚಿಸಲಾಗಿದೆ ಎಂದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಪತ್ರದ ಮೂಲಕ ಹಾಗೂ ದೂರವಾಣಿ ಮೂಲಕ ದೂರು ದಾಖಲಿಸಿದಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖಪುಟ /ಸುದ್ದಿ ಸಮಾಚಾರ