15ರಂದು ಮಾಗಡಿ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ

Magadi Someshwaraಬೆಂಗಳೂರು, ಫೆ.7- ಬೆಂಗಳೂರಿಗೆ ಅತಿ ಸನಿಹದಲ್ಲೇ ಇರುವ ಮಾಗಡಿಯ ಪುರಾತನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಫೆ.8ರ ಸೋಮವಾರದಿಂದ 18ರವರೆಗೆ 10 ದಿನಗಳ ಕಾಲ ಬ್ರಹ್ಮ ರಥೋತ್ಸವ ನಿಮಿತ್ತ ನಾನಾ ಅಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಫೆ.15ರಂದು ಬ್ರಹ್ಮ ರಥೋತ್ಸವ ಜರುಗಲಿದ್ದು, ಅದರ ಅಂಗವಾಗಿ 8ರಂದು ಅಂಕುರಾರ್ಪಣೆ, 9ರಂದು ಧ್ವಜಾರೋಹಣ, ಪ್ರಾಕಾರೋತ್ಸವ, 10ರಂದು ಶೇಷವಾಹನೋತ್ಸವ, 11ರಂದು ವೃಷಭವಾಹನೋತ್ಸವ, 12ರಂದು ಪುಷ್ಪ ಮಂಟಪೋತ್ಸವ ನಡೆಯಲಿದೆ.13ರಂದು ನಂದಿ ವಾಹನೋತ್ಸವ, 14ರಂದು ಮಹಾಭಿಷೇಕ, 15ರಂದು ಬ್ರಹ್ಮರಥೋತ್ಸವ ಹಾಗೂ ರುದ್ರಹೋಮ, ಉಯ್ಯಾಲೆ ಉತ್ಸವ, 16ರಂದು ಅಶ್ವ ವಾಹನೋತ್ಸವ, 17ರಂದು ಅವಭ್ರುತ ಸ್ನಾನ ಹಾಗೂ 18ರಂದು ತೆಪ್ಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೋಮಾಲೆ ಉತ್ಸವ ಜರುಗಲಿದೆ. ಎಲ್ಲ ಭಕ್ತಾದಿಗಳಿಗೂ ಶ್ರೀ ಸೋಮೇಶ್ವರ ಸ್ವಾಮಿ ಅನ್ನಸಂತರ್ಪಣೆ ಸೇವಾ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ದೇವಾಲಯದ ಇತಿಹಾಸ ಹಾಗೂ ಹೆಚ್ಚಿನ ಸಚಿತ್ರ ಮಾಹಿತಿಗೆhttp://ourtemples.in/magadi_someswaratemple.html ಕ್ಲಿಕ್ ಮಾಡಿ

ಮುಖಪುಟ /ಸುದ್ದಿ ಸಮಾಚಾರ