ಮುಖಪುಟ /ಸುದ್ದಿ ಸಮಾಚಾರ 

ಜನರೇ ತಕ್ಕ ಪಾಠ ಕಲಿಸುತ್ತಾರೆ:ಮೋಟಮ್ಮ

ಬೆಂಗಳೂರು, ಫೆ.7:- ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕಿ ಮೋಟಮ್ಮ ಪ್ರತಿಕ್ರಿಯೆ ನೀಡಿ, ಇದರಿಂದ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ನಾವು ಸದನದಲ್ಲಿ ಜನರ ಸಂಕಷ್ಟದ ಬಗ್ಗೆ, ರಾಜ್ಯದ ಹಿತದ ಬಗ್ಗೆ ಚರ್ಚಿಸುತ್ತಿದ್ದರೆ, ನೀತಿಗೆಟ್ಟ ಸಚಿವರು ಅಶ್ಲೀಲ ದೃಶ್ಯ ವೀಕ್ಷಣೆ ಮಾಡುತ್ತಾರೆ. ಇವರಿಗೆ ಸದನದ ಮೇಲೆ ಇರುವ ಗೌರವ ಇಷ್ಟೇ. ಇವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ರೇಣುಕಾರ್ಯ ಅವರ ಮೇಲೂ ನರ್ಸ್ ಜಯಲಕ್ಷ್ಮೀ ಆರೋಪ ಮಾಡಿದ್ದರೆ, ಹಾಲಪ್ಪ ಅವರ ಮೇಲೂ ಅತ್ಯಾಚಾರದ ಆರೋಪ ಇದೆ. ಆದರೆ ಬಿಜೆಪಿ ಈ ಇಬ್ಬರು ಶಾಸಕರ ರಾಜೀನಾಮೆ ಪಡೆದಿಲ್ಲ. ಸಚಿವರ ವಿಚಾರದಲ್ಲೂ ಹೀಗೆ ಮಾಡುತ್ತದೆ. ಈ ಸರ್ಕಾರಕ್ಕೆ ನೀತಿ, ನಿಯಮ ಏನಿಲ್ಲ ಎಂದು ಖಂಡಿಸಿದರು.
 

 

 

ಮುಖಪುಟ /ಸುದ್ದಿ ಸಮಾಚಾರ