ಮುಖಪುಟ /ಸುದ್ದಿ ಸಮಾಚಾರ 

 

ಅಶ್ಲೀಲ ದೃಶ್ಯವಲ್ಲ ಸವದಿ ಸ್ಪಷ್ಟನೆ

Lakshmanasavadiಬೆಂಗಳೂರು, ಫೆ. ೭ - ನಾನು ಮತ್ತು ಸಿ.ಸಿ. ಪಾಟೀಲ್ ಸದನದಲ್ಲಿ ವೀಕ್ಷಣೆ ಮಾಡುತ್ತಿದ್ದುದು ಬ್ಲೂಫಿಲಂ ಅಲ್ಲ, ಅದು ವಿದೇಶದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ಕು ಜನ ಸಾಮೂಹಿಕ ಅತ್ಯಾಚಾರ ಮಾಡಿ, ಕೊಂದು, ರಸ್ತೆಯಲ್ಲಿ ನೇಣು ಹಾಕಿದ ಘಟನೆ ಎಂದು ಲಕ್ಷ್ಮಣ ಸವದಿ ಸ್ಪಷ್ಟೀಕರಣ ನೀಡಿದ್ದಾರೆ.

ವಾಹಿನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ತಾವು ವಿಧಾನಪರಿಷತ್ತಿನಲ್ಲಿ ಮಲ್ಪೆ ಸೇಂಟ್ ಮೇರಿ ದ್ವೀಪದ ಅಶ್ಲೀಲತೆಯ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡು ಕೆಳಮನೆಗೆ ಬಂದಾಗ, ಸಚಿವ ಕೃಷ್ಣ ಪಾಲೇಮಾರ್ ಮೊಬೈಲ್‌ನಲ್ಲಿದ್ದ  ವಿದೇಶದಲ್ಲಿ ನಡೆದ ಒಂದು ಘಟನೆಯ ದೃಶ್ಯವನ್ನು ನೋಡುತ್ತಿದ್ದೆವು. ವಿದೇಶದಲ್ಲಿ ಹೇಗೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ನೋಡಿ ತಿಳಿದುಕೊಳ್ಳುವುದು ತಪ್ಪೆ ಎಂದು ಪ್ರಶ್ನಿಸಿದರು.

ನೀವು ನಿಮ್ಮ ಜ್ಞಾನಾರ್ಜನೆಗೆ ಮನೆಯಲ್ಲಿ ಇಂಥ ದೃಶ್ಯ ನೋಡಿ, ಇಲ್ಲ ಕಾರಿನಲ್ಲಿ ನೋಡಿ ಅದು ಬಿಟ್ಟು ಸದನ ನಡೆಯುವಾಗ ನೋಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ಆ ಮೊಬೈಲ್ ತಮ್ಮದಲ್ಲ ಹೀಗಾಗಿ ಅಲ್ಲಿ ತೋರಿಸಿದ್ದರಿಂದ ನೋಡಿದೆ ಎಂದು ತೇಪೆ ಸಾರಿಸಲು ಯತ್ನಿಸಿದರು.


 

 

 

ಮುಖಪುಟ /ಸುದ್ದಿ ಸಮಾಚಾರ