ಮುಖಪುಟ /ಸುದ್ದಿ ಸಮಾಚಾರ   
      

ವಿಶ್ವ ಕನ್ನಡ ಸಮ್ಮೇಳನ: ಭಾಗವಹಿಸುವವರಿಂದ ಅರ್ಜಿ ಆಹ್ವಾನ

godess Bhuvaneswariಬೆಂಗಳೂರು, ಫೆ.೧೫: ೨೦೧೧ ರ ಮಾರ್ಚ್ ೧೧, ೧೨ ಮತ್ತು  ೧೩ ರಂದು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಏರ್ಪಡಿಸಲಾಗಿದೆ.   ರಾಜ್ಯದ ಎಲ್ಲಾ ಆಸಕ್ತರು ಹಾಗೂ ಹೊರರಾಜ್ಯ/ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬುದು ಸರ್ಕಾರದ ಅಪೇಕ್ಷೆ.  ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರ್ಜಿ ನಮೂನೆಯನ್ನು ಸಿದ್ದಪಡಿಸಿದೆ.  ಭಾಗವಹಿಸುವವರು ಪ್ರತಿನಿಧಿ ಶುಲ್ಕ ರೂ. ೫೦/- ಗಳನ್ನು ಪಾವತಿಸಿ ನೋಂದಾಣೆ ಅರ್ಜಿ ನಮೂನೆಯನ್ನು  ರಿಜಿಸ್ಟ್ರಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು ಹಾಗೂ ಎಲ್ಲಾ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕರ ಕಚೇರಿಗಳಿಂದ ಪಡೆದು, ಭರ್ತಿ ಮಾಡಿ    ಫೆಬ್ರವರಿ ೨೦ ರೊಳಗಾಗಿ ರಿಜಿಸ್ಟ್ರಾರ್ ಕರ್ನಾಟಕ ಸಂಗೀತ  ನೃತ್ಯ ಅಕಾಡೆಮಿ, ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು -೧ ಇವರಿಗೆ ಅ ಅಥವಾ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಕಳುಹಿಸುವಂತೆ  ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಪ್ರತಿನಿಧಿಗಳಿಗೆ ಊಟ ಹಾಗೂ ವಸತಿ ಸೌಲಭ್ಯವನ್ನು ನೀಡಲಾಗುವುದು.

 ಮುಖಪುಟ /ಸುದ್ದಿ ಸಮಾಚಾರ