ಮುಖಪುಟ /ಸುದ್ದಿ ಸಮಾಚಾರ   
      

270 ಶಾಸಕರಿಗೆ ಜೀವಭಯ! ಗನ್‌ಮ್ಯಾನ್ ರಕ್ಷಣೆ

R. Ashokaಬೆಂಗಳೂರು, ಫೆ.10: ರಾಜ್ಯದಲ್ಲಿರುವ ಪ್ರತಿಶತ ೯೦ ರಷ್ಟು ಶಾಸಕರಿಗೆ ಜೀವ ಭಯವಿರುವಿದೆಯಂತೆ. ಹೀಗೆಂದವರು ಬೇರೆ ಯಾರೂ ಅಲ್ಲ ಸ್ವತಃ ಗೃಹ ಸಚಿವ ಆರ್. ಅಶೋಕ್.

ರಾಜ್ಯದ ವಿಧಾನಸಭೆ ೨೨೫ ಹಾಗೂ ಮೇಲ್ಮನೆಯ ೭೫ ಸದಸ್ಯರು ಸೇರಿ ಒಟ್ಟು ೩೦೦ ಶಾಸಕರ ಪೈಕಿ ಕನಿಷ್ಠ ೨೭೦ ಶಾಸಕರಿಗೆ ಜೀವ ಭಯ ಇದೆ. ಹೀಗಾಗಿ ಎಲ್ಲರಿಗೂ ಗನ್‌ಮ್ಯಾನ್ ಸೇವೆ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ತಮಗೆ ಜೀವ ಭೀತಿ ಇದೆ ಎಂದು ಸ್ವತಃ ಹೇಳಿಕೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆಯೇ ಎಂದು ಪತ್ರಕರ್ತರು ಕೇಳಿದಾಗ, ಶಾಸಕರೂ ಸೇರಿದಂತೆ ಎಲ್ಲರ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.

ಸಚಿವರಿಗೆ, ಜನಪ್ರತಿನಿಧಿಗಳಿಗೇ ಜೀವಭಯವಾದರೆ, ಇನ್ನು ನಮ್ಮ ನಿಮ್ಮಂಥ ಶ್ರೀಸಾಮಾನ್ಯರ ಪಾಡೇನು ಸ್ವಾಮಿ, ನಮಗೇನು ಗನ್ ಮ್ಯಾನ್ ಭದ್ರತೆ ಕೊಡುತ್ತಾರಾ?  ನೀವೇನಂತೀರಿ.

 

 ಮುಖಪುಟ /ಸುದ್ದಿ ಸಮಾಚಾರ