ಮುಖಪುಟ /ಸುದ್ದಿ ಸಮಾಚಾರ   
      

ರಾಜಧಾನಿಯಲ್ಲಿ ಹೈಟೆಕ್ ಬಸ್‌ನಿಲ್ದಾಣ

bus standಬೆಂಗಳೂರು, ಫೆ.೧೫: ಬೆಂಗಳೂರು ನಗರದ ಪ್ರಧಾನ ಕೆಂಪೇಗೌಡ ಬಸ್ ನಿಲ್ದಾಣವನ್ನು ೧೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಇಡೀ ದೇಶದಲ್ಲಿಯೇ ಮಾದರಿ ಹಾಗೂ ಅತ್ಯಾಕರ್ಷಕ ನಿಲ್ದಾಣವನ್ನಾಗಿ ಪರಿವರ್ತಿಸಲಾಗುವುದು ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಮೆಟ್ರೋ ರೈಲು ಮತ್ತು ನಗರ ಸಾರಿಗೆ ಬಸ್ ಸಂಚಾರಕ್ಕೆ ಸರಳ ಮತ್ತು ಸರಾಗ್ ಎಂಬ ಏಕರೂಪದ ಬಸ್ ಪಾಸ್‌ಗಳ ವಿತರಣೆ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ., ಬಿಎಂಟಿಸಿ ಹಾಗೂ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುವುದು.

ಈ ಯೋಜನೆಗೆ ಸರ್ಕಾರ ಭೂಮಿಯನ್ನು ಮಾತ್ರ ನೀಡುತ್ತಿದ್ದು, ದೇಶದ ಹಲವು ಹೆಸರಾಂತ, ಬೃಹತ್  ಕಂಪೆನಿಗಳು ಇಲ್ಲಿ ಬಂಡವಾಳ ಹೂಡಲು ಮುಂದೆ ಬಂದಿವೆ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 

 ಮುಖಪುಟ /ಸುದ್ದಿ ಸಮಾಚಾರ