ಮುಖಪುಟ /ಸುದ್ದಿ ಸಮಾಚಾರ   

ಬಸವಕಲ್ಯಾಣ ಸಾಂಸ್ಕೃತಿಕ ಸಂಭ್ರಮ

Bharat Nirmanಬಸವಕಲ್ಯಾಣ, ಫೆ.21: ಭಾರತ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ವಾರ್ತಾಶಾಖೆ ಹಾಗೂ ಇತರ ಮಾಧ್ಯಮ ಸಂಸ್ಥೆಗಳ ಸಹಯೋಗದಲ್ಲಿ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಭಾರತ ನಿರ್ಮಾಣ ಮಾಹಿತಿ ಆಂದೋಲನ ಮಾಹಿತಿಯ ಜೊತೆಗೆ ಮನರಂಜನೆಯ ಮಹಾಪೂರವೇ ಹರಿಸಿದೆ,

ಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗದ ವತಿಯಿಂದ ಬುಧವಾರ ಸಂಜೆ ನಡೆದ ಜಾನಪದ ರಸಸಂಜೆ ನೆರೆದಿದ್ದ ಜನಸಾಗರವನ್ನು ನಿಬ್ಬೆರೆಗುಗೊಳಿಸಿತು

ಬೀದರ್‌ನ ಲೂಯಿ ಬ್ರೈಲ್ ಕಲಾತಂಡದ (ಅಂಧರು) ಸದಸ್ಯರು ನಡೆಸಿಕೊಟ್ಟ ಜಾನಪದ ಗಾಯನವನ್ನು ಜನ ಬೆರಗು ಕಣ್ಣಿನಿಂದ ವೀಕ್ಷಿಸಿ, ಅವರ ಪ್ರತಿಭೆಗೆ ಕರತಾಡನದ ಪ್ರಶಂಸೆ ವ್ಯಕ್ತಪಡಿಸಿದರು

ಗುರುವಾರ ಸಂಜೆ ನಡೆದ ಡೊಳ್ಳು ಕುಣಿತ ನಾಡಿನ ಜಾನಪದ ಸೊಗಡನ್ನು ಉತ್ತುಂಗಕ್ಕೇರಿಸಿತು ಗದಗ ಜಿಲ್ಲೆ ಶ್ರೀ ವೀರಭದ್ರೇಶ್ವರ ಕಲಾ ತಂಡದ ಕಲಾವಿದರು ಡೊಳ್ಳು ಭಾರಿಸುತ್ತಾ ಕುಣಿದು ಕುಪ್ಪಳಿಸುತ್ತಲೇ ಕುಡಿತದ ಕೆಡಕುಗಳ ಬಗ್ಗೆ ಜನತೆಗೆ ಅರಿವು ಮೂಡಿಸಿದರು.                                                                     

 ಮುಖಪುಟ /ಸುದ್ದಿ ಸಮಾಚಾರ