ಮುಖಪುಟ /ಸುದ್ದಿ ಸಮಾಚಾರ   

ಭಾರತ ನಿರ್ಮಾಣ ವಸ್ತು ಪ್ರದರ್ಶನದಲ್ಲಿ ಮಾಹಿತಿ ಮಹಾಪೂರ

Bharat Nirmanಬಸವಕಲ್ಯಾಣ, ಫೆ.19: ಕಾಯಕವೇ ಕೈಲಾಸ ಎಂದ ಬಸವೇಶ್ವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಐದು ದಿನಗಳ ಭಾರತ ನಿರ್ಮಾಣ ಮಾಹಿತಿ ಆಂದೋಲನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳು ಜನಾಕರ್ಷಣಯ ಕೇಂದ್ರಬಿಂದು ಆಗಿವೆ.

ಬಹು ಮಾಧ್ಯಮ ಸಂಪರ್ಕ ಸೇತು ಎಂದ ಖ್ಯಾತವಾದ ಕ್ಷೇತ್ರ ಪ್ರದರ್ಶನ ಕಾರ್ಯಾಲಯ ಮಳಿಗೆ ಕೇಂದ್ರ ಸರ್ಕಾರದ ಬಹುತೇಕ ಎಲ್ಲ ಜನಪರ ಕಾರ್ಯಕ್ರಮಗಳ ಸಚಿತ್ರ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಗಿದೆ

ಮೊದಲ ೨ ದಿನಗಳಲ್ಲೇ ಮಳೆಗೆಗೆ ಸುಮಾರು ೪ ಸಾವಿರಕ್ಕೂ ಹೆಚ್ಚು ನಾಗರಿಕರು ಭೇಟಿನೀಡಿ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಅಲ್ಪ ಸಂಖ್ಯಾತರಿಗಾಗಿ ಪ್ರಧಾನಮಂತ್ರಿಗಳ ನೂತನ ೧೫ ಅಂಶಗಳ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ, ಸೇವಾಯೋಜನೆ, ಹಾಗೂ ಹೆಚ್೧ಎನ್೧ ಕಾಯಿಲೆಯ ನಿಯಂತ್ರಣ ಕುರಿತ ಚಿತ್ರಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನದ ಬಿಸಿಯೂಟ, ಸರ್ವಶಿಕ್ಷಣ ಅಭಿಯಾನದ ಪೆನ್ಸಿಲ್ ಮೇಲೆ ಕುಳಿತ ಬಾಲಕ ಬಾಲಕಿಯರ ಪ್ರತಿಮೆಗಳು, ಗಾಂಧಿ ಕನಸಿನ ಗ್ರಾಮೀಣ ಭಾರತ, ಹಾಗೂ ಭಾರತ್ ನಿರ್ಮಾಣ್ ಕುರಿತ ವರ್ಣಚಿತ್ರಗಳ ಮನ ಸೂರೆಗೊಂಡವು.

 ಮುಖಪುಟ /ಸುದ್ದಿ ಸಮಾಚಾರ