ಮುಖಪುಟ /ಸುದ್ದಿ ಸಮಾಚಾರ   

ಭಾರತ ನಿರ್ಮಾಣ್ ಧರ್ಮಸಿಂಗ್ ಶ್ಲಾಘನೆ

Dharm Singhಬಸವಕಲ್ಯಾಣ, ಫೆ.17: ಭಾರತ ಸರ್ಕಾರದ ವಾರ್ತಾ ಶಾಖೆ (ಪಿ.ಐ.ಬಿ.), ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ ೫ ದಿನಗಳ ಮಾಹಿತಿ ಆಂದೋಲನ ಹಾಗೂ ವಸ್ತು ಪ್ರದರ್ಶನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬೀದರ್ ಲೋಕಸಭಾ ಸದಸ್ಯ ಶ್ರೀ ಎನ್. ಧರ್ಮಸಿಂಗ್ ಇಂದು ಚಾಲನೆ ನೀಡಿದರು.

ಲೋಕಸಭಾ ಕ್ಷೇತ್ರದ ಸದಸ್ಯ ಶ್ರೀಎನ್.ಧರ್ಮಸಿಂಗ್ ಮಾತನಾಡಿ, ಭಾರತ ನಿರ್ಮಾಣ ಮಾಹಿತಿ ಅಂದೋಲನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಯ ಫಲ ತಲುಪಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಮಹತ್ವದ ಅಭಿಯಾನ ಎಂದರು.

ಬಸವೇಶ್ವರರ ತತ್ವಾದರ್ಶಗಳಲ್ಲಿ ಜೀವನಮೌಲ್ಯವಿದ್ದು ಬಸವಣ್ಣನವರು ಕುರಿತು ಸಂಶೋಧನಾ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀಕಪಿಲ್ ಸಿಬಲ್ ಅವರಿಗೆ ಮನವಿ ಮಾಡಲಾಗಿದೆ.

ಗುರುನಾನಕ್ ಜೀರಾ ಹಾಗೂ ಬಸವಕಲ್ಯಾಣದಂತಹ ಮಹತ್ವದ ಸ್ಥಳಗಳಿರುವ ಬೀದರ್ ನಲ್ಲಿರುವ ವಿಮಾನ ನಿಲ್ದಾಣವನ್ನು ನಾಗರಿಕ ಅನುಕೂಲಕ್ಕೆ ಮುಕ್ತಗೊಳಿಸುವ ಬಗ್ಗೆ ಶ್ರಮಿಸುವ ಭರವಸೆ ನೀಡಿದರು.

ಅಧ್ಯಕ್ಷ ಭಾಷಣ ಮಾಡಿದ ಬಸವಕಲ್ಯಾಣ ಶಾಸಕ ಶ್ರೀ ಬಸವರಾಜ ಪಾಟೀಲ್ ಅಟ್ಟೂರ ಮಾತನಾಡಿ, ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲೆ ಇದ್ದರೆ ಸಾಲದು, ಅದು ಶ್ರೀಸಾಮಾನ್ಯನಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಹಿರಿದು ಎಂದರು.ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಪ್ರಾಮಾಣಿಕತೆ ಮುಖ್ಯ ಎಂದರು

ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಶ್ರೀ ಎಂ.ನಾಗೇಂದ್ರಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು, ಬೀದರ್ ಜಿಲ್ಲಾಪಂಚಾಯ್ತ್ ಅಧ್ಯಕ್ಷ ಶ್ರೀ ನಸೀಮೊದ್ದಿನ್ ಎನ್.ಪಟೇಲ್, ಉಪಾಧ್ಯಕ್ಷೆ ಶ್ರೀ ಮತಿ ಮೀನಾಕ್ಷಿ ಸಂಗ್ರಾಮ, ಬಸವಕಲ್ಯಾಣ ನಗರಸಭೆ ಅಧ್ಯಕ್ಷರಾದ ಶ್ರೀ ಗುರುರಾಜ ಶಾಶೆಟ್ಟಿ, ಅಪರ ಜಿಲ್ಲಾಧಿಕಾರಿ ಶ್ರೀ ಎಸ್.ಎಚ್.ಪೂಜಾರ್, ವಾರ್ತಾಶಾಖೆಯ ಉಪನಿರ್ದೇಶಕಿ ಶ್ರೀಮತಿ ಪಲ್ಲವಿ ಚಿಣ್ಯ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಮಧ್ಯಾಹ್ನ ಗುಲ್ಬರ್ಗಾ ದೂರದರ್ಶನ ಕೇಂದ್ರದ ವತಿಯಿಂದ ರೇಷ್ಮೆ ಕೃಷಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಕೃಷಿ ತಜ್ಞರು ರೈತರೊಂದಿಗೆ ಸಂವಾದ ನಡೆಸಿದರು

 ಮುಖಪುಟ /ಸುದ್ದಿ ಸಮಾಚಾರ