ಮುಖಪುಟ /ಸುದ್ದಿ ಸಮಾಚಾರ   
 

2009-10ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ನಾಲ್ಕನೆ ಬಾರಿ ಹಾಗೂ ಬಿಜೆಪಿ ಸರ್ಕಾರದ 2ನೇ  ಆಯವ್ಯಯ ಮಂಡಿಸಿದರು.

ಬೆಂಗಳೂರು ಮಹಾನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಖಾಸಗಿ, ಸಾರ್ವಜನಿಕ ವಲಯದ ಪಾಲುದಾರಿಕೆ. 2 ಸಾವಿರ ಕೋಟಿ ರೂಪಾಯಿ ವಿಶೇಷ ಯೋಜನೆ ಸೇರಿದಂತೆ ಹಲವು ಯೋಜನೆ ಪ್ರಕಟಿಸಿದರು.

ಬಜೆಟ್ ಮುಖ್ಯಾಂಶ

       ಬೆಂಗಳೂರು ನಗರ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಬಜೆಟ್ ನಲ್ಲಿ ಒತ್ತು.

       ಬೆಂಗಳೂರು ಅಭಿವೃದ್ಧಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 800 ಕೋಟಿ ರೂ, ಬಿಡಿಎ ಗೆ 300 ಕೋಟಿ ರೂಪಾಯಿ.

       ಕಾವೇರಿ 4ನೇ ಭಾಗದ, 2ನೇ ಹಂತದ ಕಾಮಗಾರಿಗೆ 300 ಕೋಟಿ ರೂಪಾಯಿ.

       ನಮ್ಮ ಮೆಟ್ರೋ ಯೋಜನೆಗೆ ರಾಜ್ಯದ ಪಾಲಿನ ಬಂಡವಾಳ 600 ಕೋಟಿ ರೂಪಾಯಿ ನೀಡಿಕೆ.

       ಬೆಂಗಳೂರು ನಗರ ಸಾರಿಗೆ ಸೌಲಭ್ಯ ಆಧುನೀಕರಣಕ್ಕೆ 500 ಕೋಟಿ ರೂಪಾಯಿ.

       ಬಿಡಿಎ ವತಿಯಿಂದ ನಿರ್ಮಿಸಲುದ್ದೇಶಿಸಿರುವ 10 ಪಥಗಳ ಜಂಕ್ಷನ್ ರಹಿತ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 700 ಕೋಟಿ ರೂಪಾಯಿ.

       ಬೆಳಗಾವಿ ಸುವರ್ಣಸೌಧ ನಿರ್ಮಾಣಕ್ಕೆ 100 ಕೋಟಿ ರೂಪಾಯಿ.

       ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ, ಮೈಸೂರು ವಿಮಾನ ನಿಲ್ದಾಣಗಳ ನಿರ್ಮಾಣ, ಅಭಿವೃದ್ಧಿಗೆ 100 ಕೋಟಿ ರೂಪಾಯಿ.

       ನಿವೃತ್ತ ಪತ್ರಕರ್ತರ ಮಾಸಾಶನ ನೀಡಿಕೆ ಆದಾಯ ಮಿತಿ 5 ಸಾವಿರದಿಂದ 50 ಸಾವಿರಕ್ಕೆ ಏರಿಕೆ.

       ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 6 ಕೋಟಿ ರೂಪಾಯಿ ಅನುದಾನ.

       ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 180 ಕೋಟಿ ರೂಪಾಯಿ, ನಂದಿಬೆಟ್ಟ, ಕೆಮ್ಮಣ್ಣುಗುಂಡಿ, ಕೊಡಚಾದ್ರಿ ಗಿರಿಧಾಮಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ.

       ಕಾರವಾರದ ಟ್ಯಾಗೂರ್ ಬೀಚ್ ಅಭಿವೃದ್ಧಿಗೆ 5 ಕೋಟಿ ರೂ. ಕೃಷ್ಣರಾಜಸಾಗರ, ಬೃಂದಾವನ ಉದ್ಯಾನ ನವೀಕರಣಕ್ಕೆ 5 ಕೋಟಿ ರೂ. ಮೈಸೂರು ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ.

       ತುಮಕೂರು ವಿಶ್ವವಿದ್ಯಾಲಯಕ್ಕೆ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು.

       ಪ್ರತಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಅಭಿವೃದ್ಧಿಗೆ ಸಾವಿರ ಕೋಟಿ ರೂ. ವೆಚ್ಚ.

       ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಜಾರಿಗೆ ಪ್ರತ್ಯೇಕ ಶೀರ್ಷಿಕೆಯಡಿ ಅನುದಾನ ಹಂಚಿಕೆ ಮತ್ತು ಅನುಷ್ಠಾನಕ್ಕೆ ವಿಶೇಷ ಒತ್ತು.

       ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳಿಂದ ಶೇ. 3ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿಕೆ ಯೋಜನೆ.

       ಕೌಶಲ್ಯಾಭಿವೃದ್ಧಿ ಮೂಲಕ ಯುವಜನರಿಗೆ ಉದ್ಯೋಗಾರ್ಹತೆ ಹೆಚ್ಚಿಸಲು ವ್ಯಾಪಕ ಕ್ರಮ, ತರಬೇತಿಗೆ 100 ಕೋಟಿ ರೂ.

       ಸಾವಯವ ಕೃಷಿ ಜನಪ್ರಿಯಗೊಳಿಸಲು ಯೋಜನೆ - 100 ಕೋಟಿ ರೂಪಾಯಿ ಅನುದಾನ.

       10 ಸಾವಿರ ಕಿಲೋ ಮೀಟರ್ ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ಮತ್ತು 12 ಸಾವಿರದ 600 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು.

       ಸರ್ಕಾರದ ಯೋಜನೆಗಳ ಅನುಷ್ಠಾನದ ಸುಧಾರಣೆಗೆ ಖಾಸಗಿ ಕ್ಷೇತ್ರಗಳ ಪರಿಣತರು ಮತ್ತು ತಜ್ಞರ ಅನುಭವ, ಜ್ಞಾನದ ನೆರವು ಪಡೆಯಲು ಸರ್ಕಾರದ ನಿರ್ಧಾರ, ವಿಷಯವಾರು ಕಾರ್ಯಪಡೆಗಳ ನೇಮಕ

       ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಕುಗ್ಗದ ರಾಜ್ಯ ಯೋಜನಾ ಗಾತ್ರ. 2009-10ರ ಸಾಲಿಗೆ 29 ಸಾವಿರದ 500 ಕೋಟಿ ರೂ.ಗೆ ಹೆಚ್ಚಳ.

       ಇತಿ ಮಿತಿಯೊಳಗೆ ಕೈಗಾರಿಕಾ ಬೆಳವಣಿಗೆ, ಉದ್ಯೋಗ ನಷ್ಟ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಕ್ರಮ ಮುಖ್ಯಮಂತ್ರಿ.

       ನಾಡಿನ ಭಾವೈಕ್ಯ ಕೇಂದ್ರಗಳನ್ನು ಬಲಪಡಿಸಿ, ರಾಜ್ಯದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಮುಂಗಡ ಪತ್ರದಲ್ಲಿ ಚಿಂತನೆ.

       ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲ್ ಭೀತಿ ನಿಗ್ರಹಕ್ಕೆ ಪ್ರಸಕ್ತ ವರ್ಷ 3ಸಾವಿರದ 840 ಪೊಲೀಸ್ ಸಿಬ್ಬಂದಿ ನೇಮಕ ಯಡಿಯೂರಪ್ಪ.

       ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ರಾಜ್ಯದ ಕ್ರೀಡಾಪಟುಗಳಿಗೆ ಲಕ್ಷ ರೂ. ಪ್ರೋತ್ಸಾಹ ಧನ ಸರ್ಕಾರದ ಘೋಷಣೆ.

 ಮುಖಪುಟ /ಸುದ್ದಿ ಸಮಾಚಾರ