ಮುಖಪುಟ /ಸುದ್ದಿ ಸಮಾಚಾರ   
 

ಚುನಾವಣೆ ನೆರಳಲ್ಲಿ ಜನಪರ ರೈಲ್ವೆ ಬಜೆಟ್ ಮಂಡನೆ

lalu prasad yadav, railway ministerನವದೆಹಲಿ, ಫೆ.13 : ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಯುಪಿಎ ಸರ್ಕಾರದ ಕೊನೆಯ ಅಧಿವೇಶನದಲ್ಲಿ 6ನೇ ಬಾರಿಗೆ ರೈಲ್ವೆ ಮುಂಗಡಪತ್ರ ಮಂಡಿಸಿದರು.

2009-10ನೇ ಸಾಲಿನ ಈ ಮುಂಗಡಪತ್ರದ ಮೊದಲ ನಾಲ್ಕು ತಿಂಗಳಿಗೆ ಅವರು ಲೇಖಾನುದಾನ ನೀಡುವಂತೆ ಲೋಕಸಭೆಯನ್ನು ಕೋರಿದರು. ಲಾಲೂ ಪ್ರಸಾದ್ ಯಾದವ್ ಎಂದಿನಂತೆ ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಬಜೆಟ್ ಮಂಡಿಸಿದ್ದು, ರೈಲು ಪ್ರಯಾಣ ದರದಲ್ಲಿ ಶೇ.2ರಷ್ಟು ಇಳಿಕೆ ಮಾಡಿದ್ದಾರೆ. ಚೆನ್ನೈ -ಬೆಂಗಳೂರು ಬುಲೆಟ್ ಟ್ರೈನ್,

ಬಳ್ಳಾರಿಯ ತೋರಣಗಲ್ ರಂಜಿತ್ಪುರ ಮತ್ತು ಹೊಸಪೇಟೆ ಸ್ವಾಮಿಹಳ್ಳಿ ನಡುವೆ ಜೋಡಿ ಮಾರ್ಗ ಪ್ರಸ್ತಾಪ ಮಾಡಿದ್ದಾರೆ.

ಮೈಸೂರು- ಯಶವಂತರಪುರ ನಡುವೆ ನೂತನ ಎಕ್ಸ್ ಪ್ರೆಸ್, ಮುಂಬೈ- ಕಾರವಾರ ನಡುವೆ ಸೂಪರ್ ಫಾಸ್ಟ್ ರೈಲು,  ವಾರಕ್ಕೆ 3 ಬಾರಿ ನಿಜಾಮುದ್ದೀನ್ -ಬೆಂಗಳೂರು ನಡುವೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರಸ್ತಾಪ ಮಾಡಿದ್ದಾರೆ. ರೈಲ್ವೆ ಮುಂಗಡ ಪತ್ರದ ಇತರ ಮುಖ್ಯಾಂಶಗಳು ಇಂತಿವೆ.

        5 ವರ್ಷಗಳಲ್ಲಿ ರೈಲ್ವೆ  ಅಪಘಾತಗಳ  ಸಂಖ್ಯೆ ಗಣನೀಯ ಇಳಿಮುಖ.

        2007-08ರಲ್ಲಿ ಅಪಘಾತಗಳ ಸಂಖ್ಯೆ 195ಕ್ಕೆ ಇಳಿಕೆ.

        ಸರಕು ಸಾಗಣೆಯಲ್ಲಿ ಶೇ.8 ರಷ್ಟು ಪ್ರಗತಿ.

        ಹಲವು ಮಾರ್ಗಗಳಿಗೆ ರೈಲ್ವೆ ಸೌಲಭ್ಯ ವಿಸ್ತರಣೆ

        ದೆಹಲಿ ಹಾಲ್ದಿಯಾ ನಡುವೆ ಬುಲೆಟ್ ಟ್ರೈನ್

        ಐದುವರ್ಷಗಳಲ್ಲಿ2.3ಲಕ್ಷ ಬಂಡವಾಳ ನಿರೀಕ್ಷೆ.

        43 ಹೊಸ ಪ್ರಯಾಣಿಕ ರೈಲು ಸಂಚಾರ

        ಕರ್ನಾಟಕಕ್ಕೆ 2 ನೂತನ ರೈಲು ಮಂಜೂರು.

        ಮೇಲ್ ಟ್ರೈನ್ ಗಳ ಪ್ರಯಾಣ ದರದಲ್ಲಿ ಇಳಿಕೆ.

        ರೈಲ್ವೆ ವಿಚಾರಣೆಗೆ ನಾಲ್ಕು ಕಾಲ್ ಸೆಂಟರ್ ಸ್ಥಾಪನೆ.

        ಸರಕು ಸಾಗಣೆ ಸಾಮರ್ಥ್ಯ ಶೇ.78 ರಷ್ಟು ವೃದ್ಧಿ.

        ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ. ಎಲ್ಲ ಗ್ರಾಹಕ ಸೇವೆಗಳ ಮೇಲ್ದರ್ಜೆ.

        5 ವರ್ಷಗಳಲ್ಲಿ 90 ಸಾವಿರ ಕೋಟಿ ರುಪಾಯಿ ಆದಾಯ.

        ಆನ್ ಲೈನ್ ನಲ್ಲಿ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ.

        ರೈಲ್ವೆ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸು ಶೀಘ್ರ ಜಾರಿ.

        ನೌಕರರ ವೇತನಕ್ಕಾಗಿ 9 ಸಾವಿರ ಕೋಟಿ ರು ವೆಚ್ಚ.

        ಮುಂದಿನ ವರ್ಷ 10,576 ಕೋಟಿ ರುಪಾಯಿ ಲಾಭ ನಿರೀಕ್ಷೆ.

        19,000 ಕೋಟಿ ದಾಟಿದ ರೈಲ್ವೆ ಇಲಾಖೆಯ ಲಾಭ

        ಮುಂದಿನ 5 ವರ್ಷದಲ್ಲಿ 2.3 ಲಕ್ಷ ಕೋಟಿ ಹೂಡಿಕೆ.

        ರೈಲ್ವೆಯಲ್ಲೂ ಡಬಲ್ ಡೆಕ್ಕರ್ ಸರಕು ಸಾಗಣೆ ವ್ಯವಸ್ಥೆ.

        ಲೂಧಿಯಾನದಿಂದ -ಕೊಲ್ಕತ್ತಾ ವರೆಗೆ ಪೂರ್ವ ಸರಕು ಸಾಗಣೆ ಕಾರಿಡಾರ್.

 ಮುಖಪುಟ /ಸುದ್ದಿ ಸಮಾಚಾರ