ಮುಖಪುಟ /ಸುದ್ದಿ ಸಮಾಚಾರ 

ಮಧ್ಯಮ ಮತ್ತು ಸಣ್ಣ ನಗರಗಳಲ್ಲಿ ಸ್ಥಿರ ನಗರ ಸಾರಿಗೆ ಒದಗಿಸುವಲ್ಲಿನ ವಿಶಿಷ್ಟ ಉಪಕ್ರಮಕ್ಕಾಗಿ ನೀಡುವ Award of Excellence ಪ್ರಶಸ್ತಿ  ೨೦೧೧

Karnataka State transport minister R. Ashok receiving excellance awardಬೆಂಗಳೂರು, ಡಿ.6: ಕೆಎಸ್‌ಆರ್‌ಟಿಸಿಯು ತುಮಕೂರು ಮತ್ತು ಹಾಸನ ಪಟ್ಟಣಗಳಲ್ಲಿ ನಗರ ಸ್ಥಿರ ಸಾರಿಗೆ ಸೌಲಭ್ಯ ಒದಗಿಸುವ ಉಪಕ್ರಮಕ್ಕಾಗಿ ಅಭಿವೃದ್ಧಿಯಿಂದ ಕೂಡಿದ ನಗರ ಸಾರಿಗೆಯಲ್ಲಿನ ಉತ್ತಮ ಪದ್ಧತಿ ವರ್ಗದಡಿಯಲ್ಲಿ Award of Excellence ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಕ್ರಮವು ದೇಶದಲ್ಲಿಯೇ ಪ್ರಪ್ರಥಮ ಹಾಗೂ ವಿನೂತನವಾಗಿದ್ದು, ತುಮಕೂರು ಪಟ್ಟಣದಲ್ಲಿ ಜಾರಿಯಾಗಿದೆ. ತುಮಕೂರು ನಗರದಲ್ಲಿ ಈ ಉಪಕ್ರಮದಿಂದಾಗಿ ಪ್ರತಿಶತ ೨೦ರಷ್ಟು ಪ್ರಯಾಣಿಕ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸುಮಾರು ೫೦,೦೦೦ ನಾಗರೀಕರು ಪ್ರತಿದಿನ ನಗರ ಸಾರಿಗೆ ಸೇವೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಸದರಿ ಪ್ರಶಸ್ತಿಯನ್ನು ಸನ್ಮಾನ್ಯ ಶ್ರೀ ಕಮಲನಾಥ್, ಸನ್ಮಾನ್ಯ ನಗರಾಭಿವೃದ್ಧಿ ಸಚಿವರು, ಭಾರತ ಸರ್ಕಾರ ರವರು ಶ್ರೀ ಆರ್.ಅಶೋಕ ಸನ್ಮಾನ್ಯ ಗೃಹ ಮತ್ತು ಸಾರಿಗೆ ಸಚಿರು, ಕರ್ನಾಟಕ ಸರ್ಕಾರ ಮತ್ತು ಶ್ರೀ ಗೌರವ ಗುಪ್ತ, ಐ.ಎ.ಎಸ್., ವ್ಯವಸ್ಥಾಪಕ ನಿರ್ದೇಶಕರು , ಕೆಎಸ್‌ಆರ್‌ಟಿಸಿ ರವರಿಗೆ ನವದೆಹಲಿಯ ಮಾಣಿಕ್ ಷಾ ಸೆಂಟರ್‌ನಲ್ಲಿ ನಡೆದ ಅರ್ಬನ್ ಮೊಬಿಲಿಟಿ ಸಮ್ಮೇಳನ-೨೦೧೧ರಲ್ಲಿ ಪ್ರಶಸ್ತಿ ಪ್ರದಾನ ಮಾಡಿರುತ್ತಾರೆ.

Award of Excellence ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿಯು ಸತತವಾಗಿ ನಾಲ್ಕನೇ ಬಾರಿಗೆ ಭಾರತ ಸರ್ಕಾರದಿಂದ ಡೆದುಕೊಂಡಿರುತ್ತದೆ.  ಕಳೆದ ಮೂರು ವರ್ಷಗಳಲ್ಲಿ ಗಳಿಸಿದ ಪ್ರಶಸ್ತಿಯ ವಿವರ ಈ ಕೆಳಕಂಡಂತಿವೆ:

೨೦೦೮  ಪ್ರತಿಶತ ನೂರರಷ್ಟು ವಿದ್ಯುನ್ಮಾನ ಟಿಕೆಟ್ ವಿತರಣಾ ಯಂತ್ರವನ್ನು  ಮೈಸೂರು ನಗರ ಸಾರಿಗೆ ವಾಹನಗಳಲ್ಲಿ ಜಾರಿಗೊಳಿಸಿರುವುದಕ್ಕಾಗಿ

೨೦೦೯ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪದ್ಧತಿಯ ಯಶಸ್ವೀ ಅನುಷ್ಠಾನ ಹಾಗೂ ಪಾರದರ್ಶಕ ಮತ್ತು ಸಮರ್ಥ ರೀತಿಯಲ್ಲಿ ೭,೦೦೦ ಚಾಲಕರನ್ನು ನೇಮಕಾತಿಗಾಗಿ

೨೦೧೦  ವಿನೂತನ ಇಂಧನ ನೀತಿ ಅನುಷ್ಠಾನ ಹಾಗೂ ಬದಲೀ ಇಂಧನಗಳಾದ ಎಥನಾಲ್ ಮತ್ತು ಬಯೋ ಡೀಸಲ್ ಬಳಕೆಗಾಗಿ ಪ್ರಶಸ್ತಿ ಲಭಿಸಿದೆ.

ತುಮಕೂರು ಮತ್ತು ಹಾಸನ ಪಟ್ಟಣಗಳಲ್ಲಿ ಸಾಂಪ್ರದಾಯಿಕ ನಗರ ಸಾರಿಗೆ ವಾಹನಗಳ ಪರಿಚಯ:

ಫೆಬ್ರವರಿ ೨೦೧೧ರಲ್ಲಿ ಪ್ರಾರಂಭವಾದ ಈ ಯೋಜನೆಯು ಆಧುನಿಕ ಸೌಲಭ್ಯಗಳೊಂದಿಗೆ ಅಂದರೆ ಅತ್ಯಾಧುನಿಕ ಬಸ್ ಬ್ರಾಂಡಿಂಗ್, ಜಿ.ಪಿ.ಎಸ್. ತಂತ್ರಜ್ಞಾನಗಳನ್ನೊಳಗೊಂಡ ಎಲ್.ಇ.ಡಿ. ಮಾರ್ಗಫಲಕಗಳು, ಮುಂದಿನ ನಿಲುಗಡೆಯ ಪ್ರಕಟಣಾ ಪದ್ಧತಿ, ವಿಸ್ರೃತ ೧೦ ನಿಮಿಷಗಳ ಅಂತರದಲ್ಲಿ ಬಸ್ ಸೌಲಭ್ಯದ ಮಾರ್ಗ ಸಮೀಕ್ಷಣಾ ವರದಿ ಮತ್ತು ವಿಶಾಲ ಬಾಗಿಲುಗಳು ಮತ್ತು ಕಿಟಕಿಗಳನ್ನೊಳಗೊಂಡಿದೆ. ಕೆಎಸ್‌ಆರ್‌ಟಿಸಿ ಈ ಪ್ರಯತ್ನವು ತುಮಕೂರು ಮತ್ತು ಹಾಸನ ಪಟ್ಟಣದ ನಾಗರೀಕರ ಪ್ರಯಾಣದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಿದೆ.

ಮುಖಪುಟ /ಸುದ್ದಿ ಸಮಾಚಾರ